News Kannada
Sunday, September 25 2022

ಮಂಗಳೂರು

ವಾಯುಭಾರ ಕುಸಿತ: ಕರಾವಳಿಯಲ್ಲಿ ಮತ್ತೆ ಮಳೆ ಭೀತಿ - 1 min read

Photo Credit :

ಮಂಗಳೂರು: ಬಂಗಾಲ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಗುರುವಾರ ತಮಿಳುನಾಡು ಕಿನಾರೆ ದಾಟಲಿದ್ದು, ಇದರ ಪರಿಣಾಮವಾಗಿ ಕರ್ನಾಟಕದಲ್ಲಿಯೂ ಉತ್ತಮ ಮಳೆಯಾಗುವ ನಿರೀಕ್ಷೆ ಹೊಂದಲಾಗಿದೆ.

ಅರಬಿ ಸಮುದ್ರದಲ್ಲಿನ ವಾಯುಭಾರ ಕುಸಿತ ಗೋವಾ ಸಮೀಪದಲ್ಲಿದ್ದರೂ ಅದರ ಪರಿಣಾಮವೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಲಕೊಲ್ಲಿ ಮತ್ತು ಅರಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕರಾವಳಿಯಲ್ಲಿ ಮತ್ತೆ ಉತ್ತಮ ಮಳೆ ಸುರಿಯುವ ಆತಂಕ ಎದುರಾಗಿದೆ.

ಎಲ್ಲೋ ಅಲರ್ಟ್‌: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಇಲ್ಲಿ ಉತ್ತಮ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

ಮೀನುಗಾರರಿಗೆ ಎಚ್ಚರಿಕೆ: ಮಂಗಳೂರಿನಿಂದ ಕಾರವಾರದವರೆಗಿನ ಕರಾವಳಿ ತೀರದಲ್ಲಿ ನಾಳೆ ರಾತ್ರಿ 11.30ರ ವರೆಗೆ ಅರಬಿ ಸಮುದ್ರದಲ್ಲಿ 2.5ರಿಂದ 3.2 ಮೀ. ಎತ್ತರ ಅಲೆಗಳು ಏಳುವ ಸಾಧ್ಯತೆ ಇದೆ. ಗಾಳಿ ಕೂಡ ಗಂಟೆಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬೀಸಲಿರುವುದರಿಂದ ರಾಜ್ಯ ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಬೆಂಗಳೂರಿನ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

 

ಗೋವಾದಲ್ಲಿ ಮಲ್ಪೆಯ 2 ಬೊಟ್‌ ಮುಳುಗಡೆ
ಮಲ್ಪೆ: ಹವಾಮಾನ ವೈಪರೀತ್ಯದಿಂದ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕೆಗೆ ತೆರಳಿದ ಮಲ್ಪೆಯ ಎರಡು ಬೋಟುಗಳು ಮುಳುಗಡೆಯಾದ ಘಟನೆ ಗೋವಾದ ಪಣಜಿ ಸಮೀಪ ನಡೆದಿದೆ.

ಮಾತ ಜಟಿಗೈಶ್ವರ ಮತ್ತು ಪಾಲಕ್‌ ಬೋಟು ಮುಳುಗಡೆ ಯಾಗಿದ್ದು ಬೋಟಿನಲ್ಲಿದ್ದ ಮೀನುಗಾರರನ್ನು ಸ್ಥಳೀಯ ಮೀನುಗಾರರು ಹಾಗೂ ಗೋವಾದ ಕೋಸ್ಟ್‌ಗಾರ್ಡ್‌ ನವರು ರಕ್ಷಿಸಿ ವಾಸ್ಕೋಗೆ ಕರೆತಂದಿದ್ದಾರೆ. ಜತೆಯಲ್ಲಿದ್ದ ಮುಳುಗಡೆ ಹಂತದಲ್ಲಿದ್ದ ಕಡಲಪ್ರಿಯ ಹೆಸರಿನ ಬೋಟ್‌ ಅನ್ನು ರಕ್ಷಣೆ ಮಾಡಲಾಗಿದೆ.

See also  ಋಣಮುಕ್ತ ಕಾಯ್ದೆ ಅನುಷ್ಠಾನ ಮಾಡುವ ಇಚ್ಛಾಶಕ್ತಿ ತೋರ್ಪಡಿಸಿ: ಎಂ.ಬಿ.ಸದಾಶಿವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

1616
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು