News Kannada
Sunday, March 26 2023

ಕರಾವಳಿ

ಮಂಜೇಶ್ವರ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಆಕ್ರೋಶ

ಮಂಜೇಶ್ವರ ವರ್ಕಾಡಿ ಗ್ರಾಮ ಪಂಚಾಯತ್
Photo Credit : News Kannada

ಮಂಜೇಶ್ವರ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಕ್ರಬೈಲು – ಕಡೆಮಜಲು – ಕಲ್ಲರಕಟ್ಟೆ – ಮಲಾರು – ಕರ್ಪಿಕಾರ್ ಸಂಪರ್ಕಿಸುವ ರಸ್ತೆ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಡೆಮಜಲಿನಲ್ಲಿ ರಸ್ತೆ ಬದಿಯಲ್ಲಿ ಜನಪ್ರತಿನಿಧಿಗಳ ವಿರುದ್ಧವಾಗಿ ವ್ಯಂಗ್ಯವಾಗಿ ಬ್ಯಾನರ್ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯಾಗಿ ೪೦ ವರ್ಷಗಳಿಗಿಂತಲೂ ಹೆಚ್ಚು ವರ್ಷವಾದರೂ ಇನ್ನೂ ಕೂಡ ಸಂಪೂರ್ಣ ರಸ್ತೆಗೆ ಡಾಮರೀಕರಣವಾಗಿಲ್ಲ. ಅರ್ಧ ರಸ್ತೆಗೆ ಡಾಮರೀಕರಣ ಹಲವು ವರ್ಷಗಳ ಹಿಂದೆ ಆಗಿದ್ದರೂ ಅದು ಈಗ ಸಂಪೂರ್ಣ ಎದ್ದು ವಾಹನ ಸವಾರರ ಓಡಾಟಕ್ಕೆ ಕಷ್ಟಕರವಾಗಿದೆ.

ಪ್ರತಿದಿನವೂ ಈ ಬಾಗದಲ್ಲಿ ವಾಹನ ಸವಾರರು ಈ ಹೊಂಡ ಗುಂಡಿಯ ರಸ್ತೆಯಲ್ಲಿ, ಅರ್ದಬಂರ್ದ ಎದ್ದಿರುವ ಜಲ್ಲಿಕಲ್ಲುಗಳಿಂದಾಗಿ ಎದ್ದು ಬಿದ್ದು ಸಂಚರಿಸುವ ಪರಿಸ್ಥಿತಿಯಾಗಿದೆ. ಈ ಭಾಗದಲ್ಲಿ ಹಲವು ಮನೆಗಳಿದ್ದರೂ ಕೂಡ ರಸ್ತೆ ವ್ಯವಸ್ಥೆ ಇಲ್ಲದೆ ಜನ ಪರದಡುವಂತಾಗಿದೆ. ಆಟೋ ರಿಕ್ಷಾಗಳು ಈ ಭಾಗದಲ್ಲಿ ಸಂಚರಿಸಲಿ ಹಿಂದೇಟು ಹಾಕುವುದ್ದರಿಂದ ಜನರು ವಸ್ತುಗಳನ್ನು ಹೊತ್ತುಕೊಂಡೇ ಸಾಗಬೇಕಾದ ಪರಿಸ್ಥಿತಿ ಇದೆ. ಹಲವು ವಿದ್ಯಾರ್ಥಿಗಳು ಈ ಭಾಗದಿಂದ ಶಾಲೆಗೆ ತೆರಳುತ್ತಿದ್ದಾರೆ.

ಆದರೆ ಬಸ್ ಮತ್ತು ಇತರ ವಾಹನ ಈ ರಸ್ತೆಯಲ್ಲಿ ಸಂಚರಿಸದ ಕಾರಣ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಈ ರಸ್ತೆಯ ಮೂಲಕ ಬಾಕ್ರಬೈಲು ಮಲಾರು ಬ್ರಹ್ಮಸ್ಥಾನದ ಹಾಗೂ ಇನ್ನಿತರ ದೈವಸ್ಸ್ಥಾನಗಳು ಹಾಗೂ ಮಸೀದಿಗಳು, ಧಾರ್ಮಿಕ ಕೇಂದ್ರಗಳಿದ್ದರೂ ರಸ್ತೆ ದುರಸ್ತಿ ಮಾಡುವಲ್ಲಿ ಜನಪ್ರತಿನಿಧಿಗಳು ಉದಾಸೀನತೆ ತೋರಿದ್ದಾರೆ. ಈ ರಸ್ತೆಯಿರುವ ವಾರ್ಡ್ ನಿಂದ ನಿಂತ ಅಭ್ಯರ್ಥಿ ಕಳೆದ ಅವಧಿ ಮತ್ತು ಈ ಅವಧಿಯಲ್ಲೂ ಪಂಚಾಯತ್ ಅಧ್ಯಕ್ಷರಾದರೂ ರಸ್ತೆಗೆ ಅನುದಾನ ಒದಗಿಸುವಲ್ಲಿ ವಿಫಲರಾಗಿದ್ದಾರೆ.

ಈ ರಸ್ತೆಗಿಂತ ನಂತರ ನಿರ್ಮಾಣವಾದ ಈ ಭಾಗದ ಹಲವು ರಸ್ತೆಗೆ ಡಾಮರೀಕರಣವಾದರೂ ಈರಸ್ತೆಯನ್ನು ಮಾತ್ರ ಅಭಿವೃದ್ದಿ ಪಡಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.

See also  ಕುಂಭಶ್ರೀ ವೈಭವ ಕಾತುರದ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ವಿಸ್ತಾರ: ಶಾಸಕ ಹರೀಶ್ ಪೂಂಜ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು