ಮಂಗಳೂರು: ಶಿವದೂತೆ ಗುಳಿಗ ನಾಟಕದ ಕುರಿತು ಗೃಹಸಚಿವ ಆರಗ ಅವರ ವ್ಯಂಗ್ಯ ಮಾತು ಖಂಡಿಸಿ ಮಾಜಿ ಸಚಿವ ಕಿಮ್ಮನೆ ಅಭಿಮಾನಿ ಬಳಗದಿಂದ ಪಚ್ಚನಾಡಿ ಬಂದಲೆ ಶ್ರೀಮಂತ ಗುಳಿಗ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಶನಿವಾರ ತೀರ್ಥಹಳ್ಳಿಯಿಂದ ವಾಹನ ಜಾಥಾದಲ್ಲಿ ಆಗಮಿಸಿದ ಕಿಮ್ಮನೆ ರತ್ನಾಕರ್ ಅಭಿಮಾನ ಬಳಗ ಸದಸ್ಯರು ನಾಟಕ ಪ್ರದರ್ಶನ ಸಂದರ್ಭ ತಪ್ಪಾಗಿದ್ದರೆ ಕ್ಷಮಿಸುವಂತೆ ಪ್ರಾರ್ಥಿಸಿತು.
ಆರಗ ಅವರಿಗೆ ಕೆಡುಕು ಉಂಟು ಮಾಡದಂತೆ ಸದ್ಬುದ್ದಿ ನೀಡುವಂತೆ ಪ್ರಾರ್ಥನೆ ಮಾಡಿತು. ಕಾಂಗ್ರೆಸ್ ಮುಖಂಡರಾದ ಪದ್ಮರಾಜ್, ಮಿಥುನ್ ರೈ ಉಪಸ್ಥಿತರಿದ್ದರು.