News Karnataka Kannada
Tuesday, April 23 2024
Cricket
ಕರಾವಳಿ

ಬೆಳ್ತಂಗಡಿ: ದೇಶದ ಪರಂಪರೆಯ ತಳಹದಿಯಲ್ಲಿ ರಾಷ್ಟ್ರನಿರ್ಮಾಣ

Belthangadi: Nation-building on the foundations of the country's heritage
Photo Credit :

ಬೆಳ್ತಂಗಡಿ: ನಮ್ಮ ದೇಶದ ಭವ್ಯ ಇತಿಹಾಸ, ಪರಂಪರೆ, ಸಂಸ್ಕಂತಿಯ ಹಿನ್ನೆಲೆಯಲ್ಲಿ ವರ್ತಮಾನದ ಸ್ಥಿತಿಯನ್ನು ಗಮನಿಸಿ ರಾಷ್ಟ್ರದ ಉಜ್ವಲ ಭವಿಷ್ಯವನ್ನು ರೂಪಿಸಬೇಕಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಪ್ರಧಾನಿಯವರಿಂದ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶಿತರಾದ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಬೀಡಿನಲ್ಲಿ (ನಿವಾಸದಲ್ಲಿ) “ರಾಜ್ಯಸಭೆಯಲ್ಲಿ ರಾಜರ್ಷಿ”ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಸೇವೆಯ ಜೊತೆಗೆ ಅನೇಕ ಸೇವಾಕಾರ್ಯಗಳೊಂದಿಗೆ ರಾಜ್ಯಸಭಾ ಸದಸ್ಯನಾಗಿ ದೇಶಸೇವೆ ಮಾಡುವ ಅವಕಾಶವನ್ನೂ ಪ್ರಧಾನಿ ನರೇಂದ್ರ ಮೋದಿ ಒದಗಿಸಿದ್ದಾರೆ.

ಅವರ ದಕ್ಷ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಜನಪರ ಸೇವಾ ಕಾರ್ಯಗಳನ್ನು ಜನರಿಗೆ ತಲಪಿಸುವ ಪ್ರಯತ್ನ ಮಾಡುತ್ತಿರುವುದಾಗಿ ಹೆಗ್ಗಡೆಯವರು ಭರವಸೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಕರ್ನಾಟಕದಲ್ಲಿ ಈಗಾಗಲೆ 9,500 ಸಾಮಾನ್ಯ ಸೇವಾಕೇಂದ್ರಗಳ ಮೂಲಕ ಸಕಾಲದಲ್ಲಿ ಸರ್ಕಾರದ ಸೇವೆಗಳನ್ನು ಒದಗಿಸಿರುವುದಲ್ಲದೆ, ಹತ್ತು ಸಾವಿರ ಗ್ರಾಮೀಣ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದ ಒಂದೂವರೆ ಕೋಟಿ ಜನರಿಗೆ ಸರ್ಕಾರದ ಸೇವಾ ಸೌಲಭ್ಯಗಳನ್ನು ಈಗಾಗಲೆ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯಸಭಾ ಸದಸ್ಯರ ನೆಲೆಯಲ್ಲಿ ತನಗೆ ದೊರೆತ ಎರಡೂವರೆ ಕೋಟಿ ರೂ. ಅನುದಾನವನ್ನು ಬೀದರ್‍ನಲ್ಲಿ ಹೈನುಗಾರಿಕೆ ಅಭಿವೃದ್ಧಿಗೆ ವಿನಿಯೋಗಿಸಲಾಗಿದೆ ಎಂದರು. ರಾಜ್ಯಸಭಾ ಸದಸ್ಯನಾಗಿ ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಅನೇಕ ಸಚಿವರನ್ನು, ಗಣ್ಯರನ್ನು ಭೇಟಿಯಾಗಿ ಮಾತನಾಡುವ ಅವಕಾಶ ದೊರಕಿದೆ. ಎಲ್ಲರೂ ತನ್ನ ಮಾತಿಗೆ ವಿಶೇಷ ಗೌರವ, ಮಾನ್ಯತೆ ಕೊಡುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಡ್ರೋನ್ ಮೂಲಕ ಜಾಗದ ಅಳತೆ ಮಾಡಿ, ಹಕ್ಕುಪತ್ರ ನೀಡುವ ಕ್ರಮ ಮೊದಲಾದ ಅನೇಕ ಹೊಸ ಪದ್ಧತಿಗಳು ಸದ್ಯದಲ್ಲೆ ಬಳಕೆಗೆ ಬರಲಿವೆ. ಈಗಾಗಲೇ ಒಂದು ವರ್ಷ ರಾಜ್ಯಸಭಾ ಸದಸ್ಯನಾಗಿ ಸಂಸತ್‍ನಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರಶ್ನೆ ಕೇಳಿ ಮಾಹಿತಿ ಕಲೆ ಹಾಕಿದ್ದೇನೆ. ನನ್ನನ್ನು ಈಗಾಗಲೇ ಮೂರು ಪ್ರಮುಖ ಸಮಿತಿಗಳ ಸದಸ್ಯನಾಗಿ ನೇಮಕ ಮಾಡಿರುತ್ತಾರೆ. ಎಲ್ಲಾ ಸಂದರ್ಭಗಳನ್ನು ಸಚಿತ್ರವಾಗಿ ಇಂದು ಬಿಡುಗಡೆಯಾದ ಪುಸ್ತಕದಲ್ಲಿ ವಿವರಿಸಲಾಗಿದೆ.

ಮುಂದೆ ಹೊಸ ಸಂಸತ್ ಭವನದಲ್ಲಿ ಇನ್ನೂ ಹೆಚ್ಚು ಸಕ್ರಿಯವಾಗಿ ಭಾಗವಹಿಸಿ, ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದು ದೇಶಸೇವೆ ಮಾಡುವುದಾಗಿ ಹೆಗ್ಗಡೆಯವರು ಭರವಸೆ ನೀಡಿದರು. ಹೇಮಾವತಿ ವೀ. ಹೆಗ್ಗಡೆಯವರು ಉಪಸ್ಥಿತರಿದ್ದರು. ರಾಜ್ಯಸಭಾ ಸದಸ್ಯರ ಆಪ್ತಕಾರ್ಯದರ್ಶಿ ಕೆ.ಎನ್. ಜನಾರ್ದನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಮಂಜುಶ್ರೀ ಪ್ರಿಂಟರ್ಸ್ ಹಾಗೂ ವಿವಿಧ ಶಾಲಾ-ಕಾಲೇಜುಗಳ ಪ್ರಾಂಶುಪಾಲರುಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು