News Karnataka Kannada
Saturday, April 20 2024
Cricket
ಕರಾವಳಿ

ಬೆಳ್ತಂಗಡಿ: ತರಕಾರಿ ಸಾಗಾಟದ ವಾಹನ ಚಾರ್ಮಾಡಿ ಪೇಟೆಯಲ್ಲಿ ಪಲ್ಟಿ

Belthangadi: Vegetable transport vehicle overturned in Charmadi town
Photo Credit :

ಬೆಳ್ತಂಗಡಿ: ಕೊಟ್ಟಿಗೆಹಾರ ಕಡೆಯಿಂದ ಉಜಿರೆಯತ್ತ ಸಂಚರಿಸುತ್ತಿದ್ದ ಟೆಂಪೋ ಟ್ರಾವೆಲರ್ ಮತ್ತು ತರಕಾರಿ ಸಾಗಾಟದ ವಾಹನ ಚಾರ್ಮಾಡಿ ಪೇಟೆಯಲ್ಲಿ ಪಲ್ಟಿಯಾದ ಘಟನೆ ಶನಿವಾರ ಮಧ್ಯಾಹ್ನ ನಡೆಯಿತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೇಟೆ ಪ್ರದೇಶದ ಅಂಗಡಿಯೊಂದರ ಮುಂಭಾಗ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಟ್ರಾವೆಲರ್ ಉರುಳಿ ಬಿತ್ತು.ಅದೃಷ್ಟ ವಶಾತ್ ಟಿಟಿ ಅಂಗಡಿಯಿಂದ ಅನತಿ ದೂರದಲ್ಲಿ ಪಲ್ಟಿಯಾದ ಕಾರಣ ಹೆಚ್ಚಿನ ಅನಾಹುತ ಉಂಟಾಗುವುದು ತಪ್ಪಿದೆ. ಈ ಘಟನೆ ನಡೆದ ಕೊಂಚ ಹೊತ್ತಿನಲ್ಲಿ ಇಲ್ಲಿಂದ 100ಮೀ. ಮುಂಭಾಗದಲ್ಲಿ ತರಕಾರಿ ಸಾಗಾಟದ ವಾಹನ ರಸ್ತೆ ಬದಿಗೆ ಜಾರಿ ಚರಂಡಿಗೆ ಬಿದ್ದಿದೆ. ಎರಡು ಘಟನೆಗಳಲ್ಲಿ ಯಾರಿಗೂ ಹೆಚ್ಚಿನ ಗಾಯಗಳಿಲ್ಲ ಎಂದು ತಿಳಿದುಬಂದಿದೆ.

ಚಾರ್ಮಾಡಿ ಒಂದನೇ ತಿರುವಿನಿಂದ ಚಾರ್ಮಾಡಿ ಹಳ್ಳದವರೆಗಿನ 3 ಕಿಮೀ ವ್ಯಾಪ್ತಿಯ ರಸ್ತೆ ಕಳೆದ ನಾಲ್ಕು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆಈ 3 ಕಿಮೀ. ವ್ಯಾಪ್ತಿಯಲ್ಲಿ ಹಾಕಲಾಗಿರುವ ಡಾಮರು ವಿಪರೀತ ನಯವಾಗಿದ್ದು ಮಳೆಯ ಸಮಯ ಇಲ್ಲಿ ವಾಹನಗಳು ಚಾಲಕರ ಹತೋಟಿಗೆ ಸಿಗದೇ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ ಈ ಬಗ್ಗೆ ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಇದರಿಂದ ಮಳೆಗಾಲದಲ್ಲಿ ಅಪಘಾತಗಳು ನಿರಂತರ ನಡೆಯುತ್ತಿರುವುದಾಗಿದೂರಿದ್ದಾರೆ.ಶನಿವಾರ ಕೂಡ ಪರಿಸರದಲ್ಲಿ ಮಳೆ ಇದ್ದು ವಾಹನಗಳು ಉರುಳಿ ಬೀಳಲು ಕಾರಣವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು