News Kannada
Tuesday, December 06 2022

ಕಾಸರಗೋಡು

ಫ್ಯಾಶನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣ, ಪ್ರಮುಖ ಆರೋಪಿ ಟಿ . ಕೆ ಪೂಕೋಯ  ತಂಘಳ್ ನ್ಯಾಯಾಲಯಕ್ಕೆ ಶರಣು

Photo Credit :

ಕಾಸರಗೋಡು : ಫ್ಯಾಶನ್ ಗೋಲ್ಡ್ ಜುವೆಲ್ಲರಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಟಿ . ಕೆ ಪೂಕೋಯ ತಂಘಳ್ ಬುಧವಾರ ಮಧ್ಯಾಹ್ನ ಹೊಸದುರ್ಗ ನ್ಯಾಯಾಲಯಕ್ಕೆ ಶರಣಾಗಿದ್ದಾನೆ.
ಈತ  ಜ್ಯೂವೆಲ್ಲರಿಯ ವ್ಯವಸ್ಥಾಪಕ ನಿರ್ದೇಶಕನಾಗಿದ್ದು , ಕಳೆದ ನವಂಬರ್ ನಿಂದ ತಲೆ ಮರೆಸಿಕೊಂಡಿದ್ದನು .

ಒಂಭತ್ತು ತಿಂಗಳ ಬಳಿಕ ನ್ಯಾಯಾಲಯಕ್ಕೆ ಶರಣಾಗಿದ್ದಾನೆ .
ಪೊಲೀಸರು ಈತನಿಗಾಗಿ ಲುಕ್ ಔಟ್ ನೋಟಿಸ್ ಹೊರಡಿಸಿದ್ದರು.  ಪ್ರಕರಣದ  ಇನ್ನೋರ್ವ ಆರೋಪಿ ಯಾಗಿರುವ ಪೂಕೋಯ ತಂಘಳ್  ನ ಪುತ್ರ ಹಾಶಿಂ  ಇನ್ನೂ  ತಲೆಮರೆಸಿಕೊಂಡಿದ್ದಾನೆ .

ಪ್ರಕರಣಕ್ಕೆ ಸಂಬಂಧ ಪಟ್ಟಂತೆ  ಮಂಜೇಶ್ವರ ಮಾಜಿ ಶಾಸಕ  ಎಂ . ಸಿ ಕಮರುದ್ದೀನ್ ನನ್ನು ಈ ಹಿಂದೆ ಬಂಧಿಸಲಾಗಿತ್ತು . ಕಮರುದ್ದೀನ್ ೯೩
ದಿನಗಳ ಜೈಲು ವಾಸದ ಬಳಿಕ ಜಾಮೀನಿ ನಲ್ಲಿ ಬಿಡುಗಡೆ ಗೊಂಡಿದ್ದನು .
ಕಮರುದ್ದೀನ್ ನನ್ನು  ಬಂಧಿಸಿದ ಬೆನ್ನಿಗೆ  ಪೂಕೋಯ  ತಂಘಳ್  ತಲೆ ಮರೆಸಿಕೊಂಡಿದ್ದನು ಕಮರುದ್ದೀನ್  ಫ್ಯಾಶನ್ ಗೋಲ್ಡ್   ಜುವೆಲ್ಲರಿಯ  ಅಧ್ಯಕ್ಷನಾಗಿದ್ದನು . ಫ್ಯಾಶನ್ ಗೋಲ್ಡ್ ಇಂಟರ್ ನ್ಯಾಷನಲ್  ಎಂಬ ಸಂಸ್ಥೆ ಹುಟ್ಟು ಹಾಕಿ ಸುಮಾರು ೭೪೯ ಮಂದಿಯಿಂದ  ಠೇವಣಿ ಪಡೆದು ವಂಚನೆ ನಡೆಸಿರುವುದಾಗಿ ಪ್ರಕರಣ ದಾಖಲಿಸಲಾಗಿದ್ದು , ೧೪೮    ಕ್ಕೂ
ಪ್ರಕರಣಗಳು  ಈಗಾಗಲೇ ದಾಖಲಾಗಿವೆ.

See also  ಭರವಸೆಯನ್ನು ಬಿಜೆಪಿ ಸರಕಾರ ಈಡೇರಿಸಿಲ್ಲ: ಸುಧಾಕರ ರೆಡ್ಡಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು