NewsKarnataka
Saturday, November 27 2021

ಕಾಸರಗೋಡು

ಹೊಂಡಕ್ಕೆ ಬಿದ್ದು ಮೃತಪಟ್ಟ ಬಾಲಕಿ

ಕಾಸರಗೋಡು : ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಬಾಲಕಿಯೋರ್ವಳು ಮೃತಪಟ್ಟ ದಾರುಣ ಘಟನೆ ನಗರ ಹೊರವಲಯದ ಚೆರ್ಕಳ ದಲ್ಲಿ  ನಡೆದಿದೆ.
ಮಧೂರು ಅರಂತ್ತೋಡಿನ  ಫಿರೋಜ್ – ತಾಹಿರಾ ದಂಪತಿ ಪುತ್ರ ಫಾತಿಮಾ ( 11) ಮೃತಪಟ್ಟ ಬಾಲಕಿ. ಚೆರ್ಕಳ ಬಂಬ್ರಾಣಿ ಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದಾಗ ಈ  ಘಟನೆ ನಡೆದಿದೆ.
ಮನೆ ಸಮೀಪ ನಿರ್ಮಾಣ ಹಂತದಲ್ಲಿರುವ ಮನೆ ಪರಿಸರದಲ್ಲಿ ತೆಗೆಯಲಾಗಿದ್ದ  ಹೊಂಡಕ್ಕೆ ಆಕ್ಮಸ್ಮಿಕವಾಗಿ ಬಿದ್ದು ಈ ದುರ್ಘಟನೆ ನಡೆದಿದೆ.  ಎರಡು ದಿನಗಳಿಂದ ಮಳೆ ಸುರಿದಿದ್ದರಿಂದ ಈ ಹೊಂಡದಲ್ಲಿ ನೀರು ತುಂಬಿತ್ತು.
ಹೊಂಡಕ್ಕೆ ಬಿದ್ದಿದ್ದ ಫಾತಿಮಾ ಳನ್ನು  ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ . ಈಕೆ ಕಾಸರಗೋಡು ಸರಕಾರಿ ಹಯರ್ ಸೆಕಂಡರಿ ಶಾಲಾ ಆರನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ವಿದ್ಯಾನಗರ ಠಾಣಾ ಪೊಲೀಸರು ಮಹಜರು ನಡೆಸಿದ್ದು , ಕಾಸರಗೋಡು ;ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು  ಸಂಬಂಧಿಕರಿಗೆ  ಕೊಡಲಾಯಿತು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!