News Kannada
Sunday, October 02 2022

ಕಾಸರಗೋಡು

ಮೊಬೈಲ್ ಕಳ್ಳನ ಬಂಧನ - 1 min read

Photo Credit :

ಕಾಸರಗೋಡು : ಬಡ  ವಿದ್ಯಾರ್ಥಿಗಳ ಮೊಬೈಲ್  ಫೋನ್ ಗಳನ್ನು ಕದ್ದು ಮಂಗಳೂರಿನಲ್ಲಿ  ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ವಿದ್ಯಾನಗರ ಠಾಣಾ ಪೊಲೀಸರು  ಬಂಧಿಸಿದ್ದಾರೆ.

ಬಂಧಿತನನ್ನು ಪೆರಿಯ ಅಯಂಪಾರದ  ಹಬೀಬ್ ರಹಮಾನ್ ( 27 ) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ತರಗತಿಗೆ ನೀಡಲು ಚೆರ್ಕಳ  ಹಯರ್ ಸೆಕಂಡರಿ ಶಾಲೆಯಲ್ಲಿ  ಇಡಲಾಗಿದ್ದ ಮೊಬೈಲ್ ಫೋನ್ ಗಳನ್ನು  ಹಾಗೂ 1, 700 ರೂ . ನಗದನ್ನು ಕದ್ದಿದ್ದ.
ಜುಲೈ ಕೊನೆಯಲ್ಲಿ ಕಳ್ಳತನ ನಡೆದಿತ್ತು .

ಬಡ  ವಿದ್ಯಾರ್ಥಿಗಳಿಗಾಗಿ ನೀಡಲು ಶಾಲೆಯ  ಹಳೆ  ವಿದ್ಯಾರ್ಥಿಗಳು ನೀಡಲಾಗಿದ್ದ  ಏಳು ಮೊಬೈಲ್ ಫೋನ್  ಗಳನ್ನು  ಹಾಗೂ  1700 ರೂ . ಗಳನ್ನು ಕಳವು ಮಾಡಲಾಗಿತ್ತು . ಶಾಲಾ ಕಚೇರಿಯ  ಬೀಗ ಮುರಿದು ಕಳವು ನಡೆಸಲಾಗಿತ್ತು . ಈ ಕುರಿತು ಶಾಲಾ ಸಹಾಯಕ ಮುಖ್ಯಸ್ಥ  ಪಿ .ಎ  ಸಮೀರ್
ವಿದ್ಯಾನಗರ  ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದ್ದಾರೆ .
ಕಳವು ಗೈಯ್ಯಲಾಗಿದ್ದ ಮೊಬೈಲ್ ಗಳ  ಐಎಂಇಐ ನಂಬ್ರ ಕೇಂದ್ರೀಕರಿಸಿ ತನಿಖೆ ನಡೆಸಿದ್ದು , ಕದ್ದಿದ್ದ ಒಂದು ಮೊಬೈಲ್ ಮಂಗಳೂರಿನ ವ್ಯಕ್ತಿಯೋರ್ವರು ಬಳಸುತ್ತಿರುವುದು ಪತ್ತೆಯಾಗಿದೆ.

ಮೊಬೈಲ್ ಬಳಸುತ್ತಿದ್ದ ವ್ಯಕ್ತಿಯನ್ನುಪತ್ತೆಹಚ್ಚಲಾಯಿತು  ಪೊಲೀಸರು ವಿಚಾರಣೆ ನಡೆಸಿದಾಗ  ಮಂಗಳೂರಿನ  ಮೊಬೈಲ್ ಮಳಿಗೆಯೊಂದರಿಂದ ಖರೀದಿಸಿದ್ದಾಗಿ ತಿಳಿದುಬಂತು . ಬಳಿಕ ಈ ಮಳಿಗೆ ಕೇಂದ್ರೀಕರಿಸಿ ತನಿಖೆ ನಡೆಸಿದಾಗ  ಹಬೀಬ್ ರಹಮಾನ್ ನ ಮಾಹಿತಿ ಲಭಿಸಿದ್ದು , ಬಳಿಕ ಈತನನ್ನು ಬಂಧಿಸಲಾಯಿತು . ಈತನ ವಿರುದ್ಧ ಎರ್ನಾಕುಲಂ , ಪಾಲಕ್ಕಾಡ್  ಜಿಲ್ಲೆಗಳಲ್ಲೂ ಕಳವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳವು ಗೈದ  ಏಳು ಮೊಬೈಲ್ ಗಳಲ್ಲಿ ಐದನ್ನು ಮಂಗಳೂರಿನ ವಿವಿಧೆಡೆಗಳಿಂದ  ವಶಕ್ಕೆ ತೆಗೆದುಕೊಳ್ಳಲಾಗಿದೆ.

See also  ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ 117 ಮಂದಿಯಲ್ಲಿ ಹೊಸದಾಗಿ ಕೋವಿಡ್ ವೈರಸ್ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು