NewsKarnataka
Friday, January 28 2022

ಕಾಸರಗೋಡು

ಕಾಡಹಂದಿಗೆ ಬಡಿದ  ಪರಿಣಾಮ ಸ್ಕೂಟರ್ ಸವಾರ ಮೃತ

ಕಾಸರಗೋಡು : ರಸ್ತೆಗಡ್ಡವಾಗಿ ಬಂದ ಕಾಡಹಂದಿಗೆ ಬಡಿದ  ಪರಿಣಾಮ ಸ್ಕೂಟರ್ ಪಲ್ಟಿಯಾಗಿ ಸವಾರ ಮೃತಪಟ್ಟ ದಾರುಣ ಘಟನೆ ಶುಕ್ರವಾರ ಮುಳ್ಳೇರಿಯ ಸಮೀಪದ ಕರ್ಮಂತ್ತೋಡಿಯಲ್ಲಿ ನಡೆದಿದೆ.

ಕರ್ಮತ್ತೋಡಿ ಕಾವುಂಗಾಲ್ ನ   ಕುಞ೦ಬು ನಾಯರ್ ( ೬೦) ಮೃತಪಟ್ಟವರು. ಬೆಳಿಗ್ಗೆ ಮುಳ್ಳೇರಿಯ ಪೇಟೆಗೆ ತೆರಳಿ ಮನೆಗೆ ಮರಳುತ್ತಿದ್ದಾಗ ಕರ್ಮಂತ್ತೋಡಿಯಲ್ಲಿ  ಕಾಡುಹಂದಿಯು ರಸ್ತೆಗಡ್ಡವಾಗಿ ಓಡಿದ್ದು , ಸ್ಕೂಟರ್ ಹಂದಿಗೆ ಬಡಿದಿದೆ. ನಿಯಂತ್ರಣ ತಪ್ಪಿದ ಸ್ಕೂಟರ್ ಮಗುಚಿ ಬಿದ್ದಿದ್ದು , ರಸ್ತೆಗೆಸೆಯಲ್ಪಟ್ಟ ಕುಞ೦ಬು ನಾಯರ್ ಗಂಭೀರ ಗಾಯಗೊಂಡಿದ್ದು, ಕೂಡಲೇ ಸ್ಥಳೀಯರು ಮುಳ್ಳೇರಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತು . ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸಂಜೆ ಮೃತಪಟ್ಟರು .
ಸ್ಕೂಟರ್ ಡಿಕ್ಕಿಯ  ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಕಾಡ ಹಂದಿ ಕೂಡಾ ಸ್ಥಳದಲ್ಲೇ ಮೃತಪಟ್ಟಿದೆ.

ಘಟನಾ ಸ್ಥಳಕ್ಕೆ ಅರಣ್ಯ ಪಾಲಕರು , ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು . ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.