News Kannada
Tuesday, March 28 2023

ಕಾಸರಗೋಡು

ಚಿನ್ನಾಭರಣ ಸಾಗಾಟ ಏಜಂಟ್ ರ ಮೇಲೆ ದರೋಡೆ ನಡೆಸಿದ ಪ್ರಕರಣಕ್ಕೆ  ಸಂಬಂಧಪಟ್ಟಂತೆ ಮೂವರ ಬಂಧನ

Photo Credit :
ಕಾಸರಗೋಡು :  ರಾಷ್ಟ್ರೀಯ ಹೆದ್ದಾರಿಯ ಕುಂಬಳೆ – ಕಾಸರಗೋಡು ನಡುವಿನ ಮೊಗ್ರಾಲ್ ಪುತ್ತೂರಿನಲ್ಲಿ  ಚಿನ್ನಾಭರಣ  ಸಾಗಾಟ ಏಜಂಟ್ ರ ಮೇಲೆ ಹಲ್ಲೆ ನಡೆಸಿ  65 ಲಕ್ಷ  ರೂ. ದರೋಡೆ ನಡೆಸಿದ ಪ್ರಕರಣಕ್ಕೆ  ಸಂಬಂಧಪಟ್ಟಂತೆ ಮೂವರನ್ನು ಕಾಸರಗೋಡು ಡಿ ವೈ ಎಸ್ಪಿ  ಪಿ . ಬಾಲಕೃಷ್ಣನ್  ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಬಂಧಿತರನ್ನು  ತೃಶ್ಯೂರು ಎಳತುರುರ್ತಿಯ  ಬಿನೋಯ್ ಬೇಬಿ  ( 25) ,  ನಡವಯಲ್ ನ  ಅಖಿಲ್ ಟೋಮಿ  ( 24) ಮತ್ತು  ವಯನಾಡು ಪುಳ್ಪಲ್ಲಿಯ  ಅನು ಶಾಜು ( 28) ಎಂದುಗುರುತಿಸಲಾಗಿದೆ . ಮೂವರನ್ನು ತೃಶ್ಯೂರಿನಿಂದ ಬಂಧಿಸಲಾಯಿತು.
ಸಿ ಸಿ ಟಿ ವಿ ದ್ರಶ್ಯಗಳನ್ನು ಕೇಂದ್ರೀಕರಿಸಿ ನಡೆಸಿದ ತನಿಖ್ಯೆನಿಂದ ಮೂವರು ಆರೋಪಿಗಳನ್ನು ಬಂಧಿಸಲಾಯಿತು ಸೆ. 22  ರಂದು ಘಟನೆ ನಡೆದಿತ್ತು . ಮಹಾರಾಷ್ಟ್ರ ಮೂಲದ ಚಿನ್ನಾಭರಣ ಸಾಗಾಟ ಏಜಂಟ್ ಮೇಲೆ  ಹಲ್ಲೆ ನಡೆಸಿ  ನಗದನ್ನು ದರೋಡೆಮಾಡಲಾಗಿತ್ತು . ಪ್ರಕರಣ ದಾಖಲಿಸಿಕೊಂಡಿದ್ದ ಕಾಸರಗೋಡು ಪೊಲೀಸರು ವಿಶೇಷ ತಂಡ ರಚಿಸಿ ತನಿಖೆನಡೆಸಿದ್ದರು . ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯಿಂದ ಸಿ ಸಿ ಟಿ ವಿ ದ್ರಶ್ಯಗಳನ್ನು ಕಲೆ ಹಾಕಿದ್ದರು . ಇದರಿಂದ  ಕೆಲ ಮಾಹಿತಿಗಳು ಲಭಿಸಿದ್ದರು . ದರೋಡೆಗೆ ಬಳಸಿದ್ದ ಕಾರು ಹಾಗೂ ಆರೋಪಿಗಳ ಚಿತ್ರಣ ಲಭಿಸಿತ್ತು . ಇದನ್ನು ಕೇಂದ್ರೀಕರಿಸಿ ತನಿಖೆಯನ್ನು ಕಣ್ಣೂರು , ವಯನಾಡು, ತೃಶ್ಯೂರು  ಜಿಲ್ಲೆಗೆ ವಿಸ್ತರಿಸಲಾಗಿತ್ತು . ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಪೊಲೀಸರು  ತೃಶ್ಯೂರಿನಿಂದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಳಿದ ಆರೋಪಿಗಳ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನಗಳ ಬಗ್ಗೆ  ಮಾಹಿತಿ  ಲಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನಾಳೆ  ( ಗುರುವಾರ ) ನ್ಯಾಯಾಲಯಕ್ಕೆ ಹಾಜರು ಪಡಿಸಿ  ಹೆಚ್ಚಿನ ತನಿಖೆ ಕಸ್ಟಡಿಗೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ
See also  ಬೈಕ್ ಮತ್ತು ಓಮ್ನಿ ನಡುವೆ ಅಪಘಾತ ; ಬೈಕ್ ಸವಾರ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು