ಕಾಸರಗೋಡು : ಹಾಲು ,ಮೊಟ್ಟೆ ಹಾಗೂ ಮಾಂಸ ಉತ್ಪಾದನೆಯಲ್ಲಿ ಸ್ವಾವಲಂಬನೆ ಸರಕಾರದ ಗುರಿ ಎಂದು ಕೇರಳ ಪಶು ಸಂಗೋಪನಾ ಸಚಿವೆ ಜೆ . ಚಿಂಜುರಾಣಿ ಹೇಳಿದರು.
ಅವರು ಸೋಮವಾರ ವರ್ಕಾಡಿ ಯಲ್ಲಿ ಕ್ಷಿರೋತ್ಪಾದಕ ಸಹಕಾರಿ ಸಂಘದ ಹಾಲು ಸಂಗ್ರಹ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಾಲು ಸಂಗ್ರಹ ವ್ಯವಸ್ಥೆ ಕಲ್ಪಿಸುವುದರಿಂದ ಇನ್ನಷ್ಟು ಹಾಲು ಉತ್ಪಾದನೆ ಸಾಧ್ಯವಾಗಲಿದೆ. ಇದರಿಂದ ಉದ್ಯೋಗ ಸೃಷ್ಟಿಸಲು ಅನುಕೂಲ ವಾಗಲಿದೆ ಎಂದು ಸಚಿವರು ಅಭಿಪ್ರಾಯ ಪಟ್ಟರು.
ಹಾಲು ಉತ್ಪಾದನೆಯಲ್ಲಿ ಕೇರಳ ಮುಂದಿದೆ. ಅದರಲ್ಲೂ ಉತ್ತರ ಕೇರಳ ಹಾಲು ಉತ್ಪಾದನೆ ಯಲ್ಲಿ ಸಾಕಷ್ಟು ಮುಂದೆ ಬಂದಿದೆ. ಅಧಿಕ ಹಾಲನ್ನು ಹಾಲಿನ ಹುಡಿಯಾಗಿ ಪರಿವರ್ತಿಸ ಬಹುದಾಗಿದೆ. ಜಾನು ವಾರು ಗಳಿಗೆ ಬರುವ ರೋಗ ನಿವಾರಣೆಗೆ ಸರಕಾರ ಪ್ರಾಮುಖ್ಯ ನೀಡುತ್ತಿದೆ. ಅಗತ್ಯ ವೈದ್ಯರ ಹಾಗೂ ಸೌಲಭ್ಯ ಕಲ್ಪಿಸ ಲಾಗುವುದು. ಕೃಷಿಕರು ಇದರ ಪ್ರಯೋಜನ ವನ್ನು ಪಡೆಯ ಬೇಕು ಎಂದು ಹೇಳಿದರು.
ಸಮಾರಂಭ ದಲ್ಲಿ ಮಂಜೇಶ್ವರ ಶಾಸಕ ಎ.ಕೆ. ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಂಘ ದ ಪುನ ರ್ಜೀವನ ಯತ್ಸಿಸಿದ ವರನ್ನು ಗೌರವಿಸಿದರು. ಕ್ಷೀ ರಾ ಭಿವೃದ್ದಿ ಇಲಾಖಾ ನಿರ್ದೇಶಕ ವಿ . ಪಿ ಸುರೇಶ್ ಕುಮಾರ್ ಸೋಲಾರ್ ಪ್ಲಾಂಟ್ ನ್ನು ಉದ್ಘಾಟಿಸಿದರು. ಇಲಾಖಾ ಉಪ ನಿರ್ದೇಶಕ ಜಿಜಿ ಸಿ. ಕೃಷ್ಣನ್, ರವರು ಸಂಘದ ಉತ್ತಮ ಕೃಷಿಕರನ್ನು ಸನ್ಮಾನಿಸಿದರು.
ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಮುಹಮ್ಮದ್ ಹನೀಫ್ ರವರು ಕ್ಷೀರ ವಲಯದ ಕೃಷಿಕರನ್ನು ಗೌರವಿಸಿದರು.
ಸಮಾರಂಭದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಶಮಿನಾ ಟೀಚರ್, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ, ಬ್ಲಾಕ್ ಪಂಚಾಯತ್ ಸದಸ್ಯ ಮೊಯಿದಿನ್ ಕುಂಚಿ, ಗ್ರಾಮ ಪಂಚಾಯತ್ ಸದಸ್ಯ ರಾದ ಗೀತಾ ಸಾ ಮಾನಿ, ಇಬ್ರಾಹಿಂ ಮೊದಲಾದವರು ಉಪಸ್ಥಿತ ರಿದ್ದ ರು.
ವರ್ಕಾಡಿ ಕ್ಷೀರ ಸಂಘದ ಅಧ್ಯಕ್ಷ ಎನ್ .ಕೃಷ್ಣ ಮೂರ್ತಿ ಸ್ವಾಗತಿಸಿ, ಮಂಜೇಶ್ವರ ಕ್ಷೀ ರಾಭಿವೃದ್ದಿ ಅಧಿಕಾರಿ ಎಸ್. ಅಜಯನ್ ವಂದಿಸಿದರು.