ಕಾಸರಗೋಡು : ಎಂ ಡಿ ಎಂ ಎ ಮಾದಕ ವಸ್ತು ಸಹಿತ ದೇಹದಾರ್ಢ್ಯ ಪಟು ನೋರ್ವ ನನ್ನು ಡಿ ವೈ ಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ನಗರ ಹೊರ ವಲಯದ ವಿದ್ಯಾನಗರ ರಹಮತ್ ನಗರದ ಮುಹಮ್ಮದ್ ಷರೀಫ್ (32) ಬಂಧಿತ ಆರೋಪಿ.ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಆರೋಪಿಯ ಮನೆಗೆ ದಾಳಿ ನಡೆಸಿದ್ದು, ಆರೋಪಿಯ ಕೋಣೆಯಿಂದ 13.9 ಗ್ರಾಂ ಮಾದಕ ವಸ್ತುವನ್ನು ಪತ್ತೆ ಹಚ್ಚಲಾಗಿದೆ.