News Kannada
Sunday, December 04 2022

ಕಾಸರಗೋಡು

ಕಾಸರಗೋಡು ಜಿಲ್ಲಾ ಪಂಚಾಯತ್ ನ 2022-23ನೇ ಸಾಲಿನ ಮುಂಗಡಪತ್ರ ಮಂಡನೆ

Photo Credit :

ಕಾಸರಗೋಡು : ಜಿಲ್ಲೆಯ ಮೂಲಭೂತ , ಜಲಸಂರಕ್ಷಣೆ , ಆರೋಗ್ಯ  ಹಾಗೂ ಇನ್ನಿತರ ವಲಯಗಳಿಗೆ ಉತ್ತೇಜನ ಹಾಗೂ ಆದ್ಯತೆ ನೀಡುವ ಕಾಸರಗೋಡು  ಜಿಲ್ಲಾ ಪಂಚಾಯತ್ ನ ೨೦೨೨-೨೩ ನೇ ಸಾಲಿನ ಮುಂಗಡಪತ್ರವನ್ನು ಉಪಾಧ್ಯಕ್ಷ ಶಾನ್ ವಾಸ್ ಪಾದೂರು ಮಂಗಳವಾರ ಮಂಡಿಸಿದರು.

ನವ ಕಾಸರಗೋಡು ನಿರ್ಮಾಣ ಜೊತೆಗೆ   ಆರೋಗ್ಯ, ಉತ್ಪಾದನೆ , ಶಿಕ್ಷಣ , ನೈರ್ಮಲ್ಯ  , ಸಾಮಾಜಿಕ ಭದ್ರತೆಗೆ ಒತ್ತು  ನೀಡಲಾಗಿದೆ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೂ ಸವಾಲುಗಳನ್ನು ಮೆಟ್ಟಿ ನಿಂತು ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಸಾಗಿಸುವ ಗುರಿ ಹೊಂದಿದೆ ಎಂದು ಮುಂಗಡ ಪತ್ರದಲ್ಲಿ ಉಲ್ಲೇಖಿಸಿದರು

ಕೃಷಿ ವಲಯಕ್ಕೆ ಉತ್ತೇಜನ ನೀಡಲಾಗುವುದು .  ಕೃಷಿ  ಇಲಾಖೆ ಸಹಯೋಗದಲ್ಲಿ ಅಗ್ರಿಟೆಕ್ ಫೆಸಿಲಿಟಿ ಕೇಂದ್ರ ಸ್ಥಾಪನೆ, ಉತ್ಪಾದನೆ ಹಾಗೂ ಮಾರಾಟಕ್ಕೆ  ಕೃಷಿ ಕಾರ್ಮಿಕ ಸೇನೆ ರಚನೆ, ಹೈನುಗಾರಿಕೆಗೆ ಆರ್ಥಿಕ ನೆರವು ಯೋಜನೆ ಮುಂಗಡಪತ್ರದಲ್ಲಿ ಒಳಗೊಂಡಿದೆ.

ಅಂತರ್ಜಲ ಹೆಚ್ಚಿಸಲು  ಹಾಗೂ ಜಲಸಂರಕ್ಷಣೆಗೆ  ರಬ್ಬರಿಕೃತ  ತಡೆಗೋಡೆ  ಸ್ಥಾಪನೆಗೆ ಅನುದಾನ ಮೀಸಲಿಡಲಾಗಿದೆ. ಸಾಂಪ್ರದಾಯಿಕ ಜಲಮೂಲ ಹಾಗೂ ಜಲಾಶಯ ಗಾಲ ಸಂರಕ್ಷಣೆ ಜೊತೆಗೆ  ಜಿಲ್ಲೆಯ ಸುಮಾರು  ೧, ೫೦೦ ಬಾವಿಗಳ  ರೀಚಾರ್ಜಿ೦ಗ್   ಗೆ ಒತ್ತು  ನೀಡ ಲಾಗುವುದು.

ಯುವಕರು ಹಾಗೂ ಮಕ್ಕಳಲ್ಲಿ ಮಾದಕ ವ್ಯಸನವನ್ನು ನಿಯಂತ್ರಿಸುವ ಉದ್ದೇಶದಿಂದ  ಕ್ಲೀನ್  ಸ್ಲೇಟ್ ಯೋಜನೆ , ಜಿಲ್ಲೆಯ ಮಾನ್ಯತೆ ಪಡೆದ ಗ್ರಂಥಾಲಯಗಳಿಗೆ ಜೆ೦ಡರ್  ಫ್ರೆಂಡ್ಲಿ ಪುಸ್ತಕ ಹಾಗೂ ಶೆಲ್ಫ್ ವಿತರಣೆ  , ಜೀವನಶೈಲಿ  ರೋಗಗಳ ಅನಿಯಂತ್ರಿತ ಹೆಚ್ಚಳ ವಾಗುತ್ತಿರುವ ಹಿನ್ನಲೆಯಲ್ಲಿ ಆರಂಭಿಕ ನಿರ್ಣಯ  ಮತ್ತು ಚಿಕಿತ್ಸಾ ಸೌಲಭ್ಯ  ಸುಲಭಗೊಳಿಸುವ ಹಿನ್ನಲೆಯಲ್ಲಿ  ಸಾಮಾಜಿಕ  ಸಹಭಾಗಿತ್ವದೊನಿದಿಗೆ   ಕ್ಯಾನ್ಸರ್ ಡಿಟೆಕ್ಷನ್ ಕ್ಯಾಂಪ್ ಗಳನ್ನು ಆಯೋಜಿಸಲಾಗುವುದು  ವಿದ್ಯಾರ್ಥಿಗಳಲ್ಲಿ  ಹೆಚ್ಚುತ್ತಿರುವ  ಮಾದಕ ವ್ಯಸನಗಳನ್ನು ಗಮನದಲ್ಲಿಟ್ಟುಕೊಂಡು ವಿಮುಕ್ತಿ ಯೋಜನೆಯ ಸಹಯೋಗದೊಂದಿಗೆ ಶಾಲೆಗಳನ್ನು ಮಾದಕ  ವ್ಯಸನ ಮುಕ್ತಗೊಳಿಸುವ ಕಾರ್ಯಕ್ರಮಗಳಿಗೆ ಬಜೆಟ್ ನಲ್ಲಿ ಆದ್ಯತೆ ನೀಡಲಾಗುವುದು. ಪ್ಲಸ್ ಟು  ಸಮತ್ವ  ಶಿಕ್ಷಣದಲ್ಲಿ ಕನ್ನಡ ಕಲಿಕಾರ್ಥಿಗಳನ್ನು  ಕೂಡಾ ಸೇರಿಸಿ ಯೋಜನೆ ಮುಂದುವರಿಕೆ , ನಾಡೋಜ ಕಯ್ಯಾರ ಕಿ ಞಣ್ಣ  ರೈ   ಸ್ಮಾರಕ ಸಾಕಾರ  ಮುಂಗಡಪತ್ರದಲ್ಲಿ ಒಳಗೊಂಡಿದೆ.
ಪರಿಶಿಷ್ಟ ಸಮುದಾಯದ  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ , ಸ್ವದ್ಯೋಗ ನೆರವು , ಶಿಕ್ಷಣ ಸಹಾಯಧನ , ಲ್ಯಾಪ್ ಟಾಪ್ , ಮಕ್ಕಳ  ಪ್ರಯಾಣದ ಸೌಕರ್ಯಕ್ಕಾಗಿ   ಯೋಜನೆ , ಶಿಕ್ಷಣ ಪೂರ್ತಿಗೊಳಿಸಿದವರಿಗೆ  ವೃತ್ತಿಪರ ತರಬೇತಿ , ವಿದೇಶದಲ್ಲಿ ಉದ್ಯೋಗ ಬಯಸುವವರಿಗೆ ಸಹಾಯ ಧನ , ಜಿಲ್ಲೆಯ ವಸತಿ ರಹಿತರಿಗೆ ವಸತಿ ಯೋಜನೆ,  ಆಯ್ದ ಸ್ಥಳಗಳಲ್ಲಿ ಟೂರಿಸ್ಟ್ ಹಬ್  ಸ್ಥಾಪನೆ, ಜಿಲ್ಲಾ ಪಂಚಾಯತ್  ವ್ಯಾಪ್ತಿಯ ಎಲ್ಲಾ ಸಂಸ್ಥೆ ಗಳನ್ನು  ಸೌರ ವಿದ್ಯುತ್ ಉತ್ಪಾದನೆ ಹಾಗೂ ವಿತರಣಾ ಕೇಂದ್ರವಾಗಿ ಪರಿವರ್ತಿಸುವ ಹಾಗೂ ಸ್ವಾವಲಂಬಿ ಸ್ಥಳೀಯಾಡಳಿತ ಸಂಸ್ಥೆತಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ . ರಸ್ತೆ ಬದಿಗಳಲ್ಲಿ ಮರ ನೆಟ್ಟು ಬೆಳೆಸುವ ಯೋಜನೆ ಮುಂಗಡಪತ್ರದಲ್ಲಿ ಒಳಗೊಂಡಿದೆ.

ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಪಂಚಾಯತ್  ಸ್ಥಾಯಿ ಸಮಿತಿ ಅಧ್ಯಕ್ಷರಾದ  ಶಿನೋಜ್ ಚಾಕೊ, ಗೀತಾ ಕೃಷ್ಣನ್, ಕೆ.ಶಕುಂತಲಾ, ಎಸ್.ಎನ್.ಸರಿತಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಜೆ.ಸಜಿತ್, ಜೋಮೊನ್ ಜೋಸ್, ಸಿ.ಜಿ.ಮ್ಯಾಥ್ಯೂ, ಕೆ.  ಮಣಿಕಂಠನ್ ,  ಮಾಧವನ್ ಮಣಿಯಾರ, ಪಿ.ನಂದಕುಮಾರ್, ಜಿಲ್ಲಾ ಪಂಚಾ ಯತ್ ಯೋಜನಾ ಸಮಿತಿ ಉಪಾಧ್ಯಕ್ಷ ಡಾ.ಸಿ. ತಂಬಾನ್ ಮಾತನಾಡಿದರು.

See also  20 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ದರೋಡೆಕೋರನ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು