ಕಾಸರಗೋಡು : ಆಯಿಲ್ ಮಿಲ್ ನಿಂದ ಎರಡೂವರೆ ಲಕ್ಷ ರೂ. ನಗದು ಕಳವು ಗೈದ ಪ್ರಕರಣ ಕ್ಕೆ ಸಂಬಂಧ ಪಟ್ಟಂತೆ ನಿವಾಸಿ ಸೇರಿದಂತೆ ಇಬ್ಬರನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ವಿಟ್ಲದ ಮುಹಮ್ಮದ್ ಅಜರುದ್ದೀನ್ (35) ಮತ್ತು ಕಲ್ಲಕಟ್ಟದ ಸಲೀಂ (26) ಬಂಧಿತರು. ಮೇ 3 ರಂದು ರಾತ್ರಿ ವಿದ್ಯಾನಗರ ದ ಲ್ಲಿರುವ ಕಾಸರಗೋಡು ಸರಕಾರಿ ಕಾಲೇಜು ಪರಿಸರದ ಆಯಿಲ್ ಮಿಲ್ ನ ಬೀಗ ಮುರಿದು ಒಳನುಗ್ಗಿ ನಗದು ಕಳವು ಮಾಡಲಾಗಿತ್ತು. ಮಿಲ್ ನ ಮಾಲಕ ಚೆಮ್ನಾಡ್ ಅಬ್ದುಲ್ ರಹಿಮಾನ್ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು.
ಸಿಸಿ ಟಿ ವಿ ದೃಶ್ಯ ಗಳನ್ನು ಕಲೆ ಹಾಕಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳ ಗುರುತು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇವರು ಆಯಿಲ್ ಮಿಲ್ ಸಮೀಪದ ಆಸ್ಪತ್ರೆ ಯೊಂದರ ಸಮೀಪ ನಿಲ್ಲಿಸಿದ್ದ ಟೂರಿಸ್ಟ್ ಬಸ್ ನ ಸ್ಟೀರಿಯೋ ಸೆಟ್ ನ್ನು ಕಳವು ಗೈಯ್ಯಲು ಯತ್ನಿಸಿದ್ದು, ಶಬ್ದ ಕೇಳಿ ಸಿಬಂದಿ ಗಳು ಇಬ್ಬರನ್ನು ಓಡಿ ಸಿದ್ದರು. ಅದೇ ದಿನ ರಾತ್ರಿ ಆಯಿಲ್ ಮಿಲ್ ನಲ್ಲಿ ಕಳವು ನಡೆದಿತ್ತು