ಕಾಸರಗೋಡು : ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿ ಗಳು ಮೃತ ಪಟ್ಟ ಘಟನೆ ಬುಧವಾರ ಸಂಜೆ ಪೆರಿಯ ಸಮೀಪದ ಚೆರ್ಕಪ್ಪಾರ ದಲ್ಲಿ ನಡೆದಿದೆ.
ದಿಲ್ ಜಿತ್ (14) ಮತ್ತು ನಂದ ಗೋಪಾಲ (14) ಮೃತ ಪಟ್ಟವರು.
ಇಬ್ಬರು 9 ನೇ ತರಗತಿ ವಿದ್ಯಾರ್ಥಿ ಗಳಾಗಿ ದ್ದಾರೆ. ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ ಚೆರ್ಕಪ್ಪಾರ ಶಾಲಾ ಸಮೀಪದ ಕೆರೆಗೆ ಸಹಪಾಠಿಗಳ ಜೊತೆ ಸ್ನಾನ ಕ್ಕಿಳಿ ದಿದ್ದರು. ಆರು ಮಂದಿ ಕೆರೆಗೆ ಇಳಿದಿದ್ದರು. ಈ ಪೈಕಿ ಇಬ್ಬರು ಕೆಸರಿ ನಲ್ಲಿ ಸಿಲುಕಿದ್ದು ಮೇಲೆ ಬರಲಾರದೆ ನೀರಿನಲ್ಲಿ ಮುಳುಗಿದ್ದರು.
ಬೊಬ್ಬೆ ಕೇಳಿ ಪರಿಸರ ವಾಸಿಗಳು ಹಾಗೂ ಸುದ್ದಿ ತಿಳಿದು ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ನಡೆಸಿ ಇಬ್ಬರ ನ್ನು ಮೇಲಕ್ಕೆತ್ತಿ ಜಿಲ್ಲಾಸ್ಪತ್ರೆ ಗೆ ತಲುಪಿದರೂ ಆಗಲೇ ಮೃತ ಪಟ್ಟಿದ್ದ ರು . ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಗರದಲ್ಲಿರಿಸಲಾಗಿದೆ