ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ಥೆ ಪುತ್ರಿಯನ್ನು ಕೊಲೆಗೈದು ತಾಯಿ ಆತ್ಮಹತ್ಯೆ ಗೈದ ದಾರುಣ ಘಟನೆ ರಾಜಪುರ ಸಮೀಪದ ಚಾಮುಂಡಿಕುನ್ನು ಎಂಬಲ್ಲಿ ನಡೆದಿದೆ. ಚಾಮುಂಡಿಕುನ್ನು ವಿನ ವಿಮಲಕುಮಾರಿ ( ೫೮) ಮತ್ತು ಪುತ್ರಿ ರೇಶ್ಮಾ ( ೨೮) ಮೃತಪಟ್ಟವರು.
ಸೋಮವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ ನಡೆದಿದೆ. ರೇಶ್ಮಾಳನ್ನು ಕತ್ತು ಹಿಸುಕಿ ಕೊಲೆಗೈದ ಬಳಿಕ ತಾಯಿ ವಿಮಲಕುಮಾರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರೇಶ್ಮಾಳ ಮೃತದೇಹ ಮಂಚದಲ್ಲಿ ಹಾಗೂ ವಿಮಲಾಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ
ಮೃತದೇಹವನ್ನು ಜಿಲ್ಲಾಸ್ಪತ್ರೆಯಲ್ಲಿರಿಸಲಾಗಿದೆ. ರಾಜಪುರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.