News Kannada
Monday, September 26 2022

ಕಾಸರಗೋಡು

ಮಾತೃ ಸಂಸ್ಕೃತಿ  ಅನುಮೋದಕರಾಗಿ ಬಾಳಿದವರು ಕವಿ ಕಯ್ಯಾರರು: ಎಸ್.ಪ್ರದೀಪ್ ಕುಮಾರ್   - 1 min read

Photo Credit :

ಕಾಸರಗೋಡು: ಮಾತೃ ಸಂಸ್ಕೃತಿ ಮರೆತ ಪರಿಣಾಮ ಶಾಸ್ತ್ರಗಳು ಶಸ್ತ್ರಗಳಾಗಿ ಯೋಚಿಸುವ ಕಾಲವಿಂದು ಬಂದಿರುವುದು ದುರ್ದೈವ. ಮಾತೃ ಸಂಸ್ಕೃತಿ  ಅನುಮೋದಕರಾಗಿ ಬರೆದಂತೆ ಬಾಳಿದವರು ಕವಿ ಕಯ್ಯಾರರು ಎಂದು  ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಸಂಘಟಕ ಎಸ್.ಪ್ರದೀಪ್ ಕುಮಾರ್ ಕಲ್ಕೂರ  ಹೇಳಿದರು.

ಕಲ್ಕೂರ ಪ್ರತಿಷ್ಠಾನ ಮಂಗಳೂರು ಪೈವಳಿಕೆ ಸಮೀಪದ ಜೋಡುಕಲ್ಲಿನ ಜನಾರ್ದನ ಕಲಾವೃಂದದ ಸಹಯೋಗದಲ್ಲಿ ಜೋಡುಕಲ್ಲು ಜೆಕೆವಿ ಸಭಾಂಗಣದಲ್ಲಿ  ಸಂಜೆ ಆಯೋಜಿಸಿದ್ದ ಕಯ್ಯಾರ ಕಿಞ್ಞಣ್ಣ  ರೈ ಹುಟ್ಟುಹಬ್ಬ-ಕಿಞ್ಞಣ್ಣ ರೈ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭವನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿ ಮಾತನಾಡಿ, ಗಡಿನಾಡಿನ ಕನ್ನಡ ಸಾಂಸ್ಕೃತಿಕ , ಸಾಹಿತ್ತಿಕ ಮೌಲ್ಯವನ್ನು ಕಾಪಿಡುವಲ್ಲಿ ಕವಿ ಕಯ್ಯಾರರ ಶ್ರಮ ಅಪರಿಮಿತವಾದುದು. ಇಂದು ಕಾಸರಗೋಡಿನ ಕನ್ನಡ ಭಾಷೆ, ಸಂಸ್ಕೃತಿಗೆ ಎದುರಾಗಿರುವ ಸವಾಲುಗಳಿಗೆ ತಾರ್ಕಿಕ ಅಂತ್ಯ ಹಾಡುವ ನಿಟ್ಟಿನಲ್ಲಿ ವಿಧಾನ ಸಭೆಯಲ್ಲಿ ತಾನು ಅಹರ್ನಿಶಿಯಾಗಿ ಪ್ರಯತ್ನ ಮುಂದುವರಿಸುತ್ತಿದ್ದು, ಕಾಸರಗೋಡು ಕನ್ನಡಕ್ಕೆ ನೀಡಿರುವ ಸಾಂವಿಧಾನಿಕ ಸವಲತ್ತುಗಳ ರಕ್ಷಣೆಗೆ ಬದ್ದನಾಗಿರುವೆ ಎಂದರು.

ಈ ಸಂದರ್ಭ ಖ್ಯಾತ ವೈದ್ಯ, ಸಾಹಿತಿ, ಅರ್ಥಧಾರಿ ಡಾ.ರಮಾನಂದ ಬನಾರಿ ಅವರಿಗೆ ಕಯ್ಯಾರು ಕಿಞ್ಞಣ್ಣ ರೈ ಪ್ರಶಸ್ತಿಯನ್ನು  ಕರ್ನಾಟಕ  ಕನ್ನಡ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅ|ಧ್ಯಕ್ಷ ಡಾ.ಸಿ.ಸೋಮಶೇಖರ್ ಪ್ರದಾನಗೈದು ಮಾತನಾಡಿ, ಕನ್ನಡ ಭಾಷೆಯ ಶಕ್ತಿ ಪ್ರದಾನರಾಗಿ ಕವಿ ಕಯ್ಯಾರರು ನೀಡಿರುವ ಕೊಡುಗೆ ಸಮಗ್ರ ಕರ್ನಾಟಕಕ್ಕೇ ಮಾದರಿಯಾದುದು. ಸ್ವಾತಂತ್ಯ ಹೋರಾಟ, ಕರ್ನಾಟಕ ಏಕೀರಣ ಹೋರಾಟ ಹಾಗೂ ಕರ್ನಾಟಕ ವಿಲೀನೀಕರಣ ಹೋರಾಟಗಳೆಂಬ ಮೂರು ಮುಖಗಳಲ್ಲಿ ಶತಾಯುಷಿ ನಾಡೋಜ ಕಯ್ಯಾರ ಕಿಞ್ಞಣ್ಣ್ಣ ರೈಗಳು ಗಡಿನಾಡು ಮತ್ತು ಕರ್ನಾಟಕಕ್ಕೆ ಬಹುದೊಡ್ಡ ಕೊಂಡಿಯಾಗಿದ್ದವರು. ಡಾ.ಬನಾರಿಯವರಿಗೆ ಕಲ್ಕೂರ ಪ್ರತಿಷ್ಠಾನ ನೀಡಿರುವ ಈ ಪ್ರಶಸ್ತಿಯಿಂದ ಸ್ಪೂರ್ತಿ ಪಡೆದ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರವು ಮುಂದಿನ ವರ್ಷದ ಕಯ್ಯಾರ ಪ್ರಶಸ್ತಿಯನ್ನು ಡಾ. ಬನಾರಿಯವರಿಗೆ ನೀಡಲು ಉತ್ಸುಕವಾಗಿದೆ ಎಂದು ಘೋಷಿಸಿದರು.

ಕಯ್ಯಾರರ ಸುಪುತ್ರ ಡಾ.ಪ್ರಸನ್ನ  ರೈ ಕಯ್ಯಾರು, ಜನಾರ್ದನ ಹಂದೆ, ಪ್ರೊ.ಎ.ಶ್ರೀನಾಥ್ ಕಾಸರಗೋಡು, ಗ್ರಾ.ಪಂ.ಸದಸ್ಯೆ ಸುಜಾತಾ ಶೆಟ್ಟಿ, ಜಿಲ್ಲಾ ಕನ್ನಡ  ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಪ್ರಭಾಕರ ಕಲ್ಲೂರಾಯ ಬನದಗದ್ದೆ  , ಗಡಿನಾಡ ಸಾಹಿತ್ಯ   ಸಾಂಸ್ಕೃತಿಕ ಅಕಾಡೆಮಿ ಕೋಶಾಧಿಕಾರಿ ಅನೀಶ್ ಶೆಟ್ಟಿ ಮಡಂದೂರು  ಉಪಸ್ಥಿತರಿದ್ದರು. ಹಿರಿಯ ವೈದ್ಯ  ಡಾ.ಕೆ.ಪಿ.ಹೊಳ್ಳ ಕಯ್ಯಾರು, ಕಾಸರಗೋಡು ಕನ್ನಡ ಭವನ ಗ್ರಂಥಾಲಯದ ಸಂಸ್ಥಾಪಕ  ವಾಮನ ರಾವ್ ಬೇಕಲ್, ಅರಿಬೈಲು ಗೋಪಾಲ ಶೆಟ್ಟಿ ಅವರಿಗೆ ಸಾಧಕ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಝಡ್ ಎ ಕಯ್ಯಾರು ಸ್ವಾಗತಿಸಿ, ವಂದಿಸಿದರು. ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು.

See also  ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 12 ಮಂದಿಗೆ ಕೊರೋನಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು