ಕಾಸರಗೋಡು : ಕೊಲೆ ಸೇರಿದಂತೆ ಐದಕ್ಕೂ ಅಧಿಕ ಪ್ರಕರಣದ ಆರೋಪಿಯೋರ್ವನನ್ನು ಕಾಫಾ ಕಾಯ್ದೆಯಂತೆ ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಕುಂಬಳೆ ಶಿರಿಯದ ಮುಹಮ್ಮದ್ ರಫೀಕ್ ( ೨೯) ಬಂಧಿತ ಆರೋಪಿ . ಬಂದ್ಯೋಡಿನಿಂದ ಈತನನ್ನು ಬಂಧಿಸಿದ್ದಾರೆ.
ಉಪ್ಪಳದ ಪೈಂಟಿಂಗ್ ಕಾರ್ಮಿಕನಾಗಿದ್ದ ಮುಹಮ್ಮದ್ ಅಲ್ತಾಫ್ ನನ್ನು ಕಾರಿನಲ್ಲಿ ಅಪಹರಿಸಿ ಕರ್ನಾಟಕಕ್ಕೆ ಕರೆದೊಯ್ದು ಕೊಲೆ ನಡೆಸಿದ ಸೇರಿದಂತೆ ಐದಕ್ಕೂ ಅಧಿಕ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.