ಕಾಸರಗೋಡು: ಗಲ್ಫ್ ಉದ್ಯೋಗಿ ಸೀತಂಗೋಳಿ ಮುಗು ವಿನ ಅಬೂಬಕ್ಕರ್ ಸಿದ್ದಿಕ್ ( 32) ಕೊಲೆ ಪ್ರಕರಣದ ಐವರು ಆರೋಪಿಗಳನ್ನು ನ್ಯಾಯಾಲಯ ಏಳು ದಿನಗಳ ನ್ಯಾಯಾಂಗ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ತೀರ್ಫು ನೀಡಿದೆ. ಬಂಧಿತ ಐವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಮಂಜೇಶ್ವರ ಉದ್ಯಾವರದ ರಿಯಾಜ್ ಹಸನ್ ( 33) . ಉಪ್ಪಳ ದ ಅಬ್ದುಲ್ ರಜಾಕ್ ( 46) , ಕುಂಜತ್ತೂರಿನ ಅಬೂಬಕ್ಕರ್ ಸಿದ್ದಿಕ್ ( 33) ಉದ್ಯಾವರ ಜೆ . ಎಂ ರಸ್ತೆಯ ಅಬ್ದುಲ್ ಅಝೀಜ್ ( 36) ., ಅಬ್ದುಲ್ ರಹೀಮ್ ( 41) ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಆರೋಪಿಗಳನ್ನು ಕೃತ್ಯ ನಡೆಸಿದ ಸ್ಥಳ ಹಾಗೂ ಇನ್ನಿತರ ಸ್ಥಳ ಗಳಿಗೆ ಕರೆದೊಯ್ದು ಮಾಹಿತಿ ಕಲೆ ಹಾಕಲಾಗುತ್ತಿದ್ದು, ಗುರುವಾರ ಅಬೂಬಕ್ಕರ್ ಸಿದ್ದಿಕ್ ನನ್ನು ದಿಗ್ಬಂಧ ದಲ್ಲಿರಿಸಿ ಥಳಿಸಿ ಕೊಲೆ ಗೈದ ಸ್ಥಳಕ್ಕೆ ಕರೆದೊಯ್ದು ಮಾಹಿತಿ ಪಡೆದಿದ್ದಾರೆ. ಕೃತ್ಯದಲ್ಲಿ ನೇರವಾಗಿ ಶಾಮೀಲಾದ ಏಳು ಮಂದಿ ತಲೆ ಮರೆಸಿಕೊಂಡಿದ್ದು , ಇವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಈ ಪೈಕಿ ಇಬ್ಬರು ವಿದೇಶಕ್ಕೆ ಪರಾರಿಯಾಗಿದ್ದಾರೆ