ಕಾಸರಗೋಡು: ಭಾರೀ ಮಳೆಗೆ ವೆಳ್ಳರಿಕುಂಡು ತಾಲೂಕಿನ ಬಳಾಲ್ ನಲ್ಲಿ ಭೂಕುಸಿತ ಉಂಟಾಗಿದ್ದು, ಭೀಮನಡಿಯಲ್ಲಿ ಮಹಿಳೆಯೋರ್ವರು ನೀರುಪಾಲಾದ ಬಗ್ಗೆ ವರದಿಯಾಗಿದೆ.
ಬಳಾಲ್ ಚುಳ್ಳಿ ವಲಯದ ಅರಣ್ಯದಲ್ಲಿ ಭೂಕುಸಿತ ಉಂಟಾಗಿದ್ದು, ಮಣ್ಣು ರಸ್ತೆ ಹಾಗೂ ಜನವಸತಿ ಪ್ರದೇಶಗಳಿಗೆ ಹರಿದು ಬಂದಿದೆ.
20 ರಷ್ಟು ಕುಟುಂಬ ಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭೀಮನಡಿಯಲ್ಲಿ ಲತಾ ಎಂಬ ಮಹಿಳೆ ನೀರುಪಾಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.