News Kannada
Saturday, August 13 2022

ಕಾಸರಗೋಡು

ಕಾಸರಗೋಡು: ಪೂರ್ಣಗೊಂಡಿರುವ ಆನೆಗೋಡೆಗೆ ಆ.8 ರಂದು ಚಾಲನೆ - 1 min read

Kasargod: The completed elephant wall will be inaugurated on August 8.

ಕಾಸರಗೋಡು: ಕಾಡಾನೆ ದಾಳಿಯನ್ನು ಎದುರಿಸಲು ಕಾರಡ್ಕ ಬ್ಲಾಕ್ ಪಂಚಾಯತ್ ಆರಂಭಿಸಿರುವ ಆನೆಗೋಡೆ ಯೋಜನೆಯ ಮೊದಲ ಹಂತ ಅಂತಿಮ ಹಂತದಲ್ಲಿದೆ.

ಪ್ರಸ್ತುತ ಪೂರ್ಣಗೊಂಡಿರುವ ಎರಡೂವರೆ ಕಿಲೋಮೀಟರ್ ಆನೆಗೋಡೆಗೆ ಆ.8 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ಚಾಲನೆ ನೀಡುವರು. ದೇಲಂಪಾಡಿ ಪಂಚಾ ಯತ್ ನ ಬೆಳ್ಳಕಾನದಿಂದ ವಳಿಯಕೊಚ್ಚಿ ತನಕ ಎರಡೂವರೆ ಕಿಲೋಮೀಟರ್ ಬೇಲಿ ಪೂರ್ಣಗೊಂಡಿದೆ.

ಉಳಿದ ನಾಲ್ಕು ಕಿಲೋಮೀಟರ್ ಗಳನ್ನು ಆಗಸ್ಟ್ 15ರೊಳಗೆ ಪೂರ್ಣಗೊಳಿಸಿ ಪ್ರಸ್ತುತ ಕಾಡಾನೆಗಳ ಹಾವಳಿಯನ್ನು ಪರಿಹರಿಸಲಾಗುವುದು ಎಂದು ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯೂ ಹಾಗೂ ವಿಭಾಗೀಯ ಅರಣ್ಯಾಧಿಕಾರಿ ಪಿ.ಬಿಜು ತಿಳಿಸಿದ್ದಾರೆ.

ಕಾರಡ್ಕ ಬ್ಲಾಕ್ ಪಂಚಾಯತ್ ನೇತೃತ್ವದಲ್ಲಿ ದೇಲಂಪಾಡಿ, ಕಾರಡ್ಕ ಮುಳಿಯಾರ್, ಬೇಡಡ್ಕ , ಕುತ್ತಿಕೋಲ್ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಮಾದರಿ ಯೋಜನೆ ಯಾಗಿದ್ದು ಕರ್ನಾಟಕದ ಗಡಿ ಹಂಚಿಕೊಂಡಿರುವ ದೇಲಂಪಾಡಿ ಮತ್ತು ಕುತ್ತಿಕೋಲ್ ಪಂಚಾಯತ್ ಗಳ ಗಡಿಯಲ್ಲಿ 29 ಕಿ.ಮೀ ಉದ್ದದ ಸೋಲಾರ್ ಬೇಲಿ ನಿರ್ಮಿಸಲಾಗುತ್ತಿದೆ. ಮೊದಲ ಹಂತದಲ್ಲಿ 8 ಕಿ.ಮೀ ಬೇಲಿ ನಿರ್ಮಿಸಲು ನಿರ್ಧರಿಸಲಾಗಿದೆ.

ಅದಕ್ಕಾಗಿ ಅರಣ್ಯ ಇಲಾಖೆಗೆ 60 ಲಕ್ಷ ರೂ. ಉಳಿದ 21 ಕಿ.ಮೀ ದೂರವನ್ನು ಮೂರು ಹಂತದ ಪಂಚಾಯತ್ ಗಳ ವಾರ್ಷಿಕ ಯೋಜನೆಗೆ ಸೇರಿಸಿ ಜಿಲ್ಲಾ ಪಂಚಾಯತ್ 20 ಲಕ್ಷ ರೂ., ಕಾರಡ್ಕ ಬ್ಲಾಕ್ ಪಂಚಾಯತ್ 40 ಲಕ್ಷ ರೂ., ಮುಳಿಯಾರ್, ಕಾರಡ್ಕ , ಬೇಡಡ್ಕ , ದೇಲಂಪಾಡಿ, ಕುತ್ತಿಕೋಲ್ ಪಂಚಾಯತ್ ಗಳು ಅನುದಾನ ನೀಡಲಿವೆ. ಮಾದರಿ ಯೋಜನೆ ಎಂದು ಪರಿಗಣಿಸಿ ಯೋಜನಾ ಮಂಡಳಿಯು ಬ್ಲಾಕ್ ಪಂಚಾಯತ್ ಗೆ 66 ಲಕ್ಷ ರೂ. ನೀಡಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಡಿಎಫ್‌ಒ ಪಿ.ಬಿಜು, ಸಾಮಾಜಿಕ ಅರಣ್ಯಾಧಿಕಾರಿ ಧನೇಶ್ ಕುಮಾರ್, ಬ್ಲಾಕ್ ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿರುವರು.

See also  ಬೆಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆಯನ್ನು ಖಂಡಿಸಿದ ಬಿ.ವೈ. ವಿಜಯೇಂದ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು