ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು ಮಂಜೇಶ್ವರ ಇವುಗಳ ಜಂಟಿ ಆಶ್ರಯದಲ್ಲಿ ನಾಡೋಜ ಪಂಪ ಪ್ರಶಸ್ತಿ ಪುರಸ್ಕೃತ, ಮಹಾಕವಿ, ಕನ್ನಡ ಹೋರಾಟಗಾರ, ರಾಷ್ಟ್ರಪ್ರಶಸ್ತಿ ವಿಜೇತ, ನಿವೃತ್ತ ಅಧ್ಯಾಪಕ, ಬಹುಭಾಷಾ ವಿದ್ವಾಂಸ, ಉದ್ದಾಮ ಸಾಹಿತಿ ಡಾ. ದಿ. ಕಿಞ್ಞಣ್ಣ ರೈಗಳ ಆಯ್ದ ಕಾವ್ಯ ಭಾಗದ ಚಿಂತನ-ಮಂಥನ ಮತ್ತು ಸಂಸ್ಮರಣೆ ಕಾರ್ಯಕ್ರಮವು 9/8 /2022ರ ಮಂಗಳವಾರ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಮಂಜೇಶ್ವರ ಇಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ರೈಗಳ ಆಯ್ದ ಕಾವ್ಯ ಭಾಗದ ಚಿಂತನ-ಮಂಥನ ಖ್ಯಾತ ಸಾಹಿತಿ ನಿವೃತ್ತ ಪ್ರಾಧ್ಯಾಪಕರಾದ ಡಾ. ಪ್ರಮೀಳಾ ಮಾಧವ. ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಘಟಕದ ಅಧ್ಯಕ್ಷರಾದ ಎಸ್ ವಿ ಭಟ್ ವಹಿಸಲಿದ್ದಾರೆ. ಸಂಸ್ಮರಣೆ ಭಾಷಣವನ್ನು ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕರು ಹಾಗೂ ಖ್ಯಾತ ಸಾಹಿತಿಗಳಾದ ಡಾ ವಸಂತಕುಮಾರ್ ಪೆರ್ಲ ನಡೆಸಿಕೊಡಲಿದ್ದಾರೆ.
ಅವರ ಮಾರ್ಗದರ್ಶನದ ಸವಿನೆನಪುಗಳನ್ನು ನಿವೃತ್ತ ಪ್ರಾಧ್ಯಾಪಕರು ಹಾಗೂ ಗಾಯಕರಾದ ಡಾ ಪ್ರಸನ್ನ ರೈ ಹಾಗೂ ಶುಭಾಶಂಸನೆಯನ್ನು ಮಂಜೇಶ್ವರ ಗೋವಿಂದ ಪೈ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶಿವಶಂಕರ ಪಿ ನಡೆಸಿಕೊಡಲಿದ್ದಾರೆ.
ಈ ಸಂದರ್ಭದಲ್ಲಿ ನಿವೃತ್ತ ನೌಕಾಪಡೆಯ ಕಮಾಂಡರ್ ಹಾಗೂ ಸಮಾಜಸೇವಕರಾದ ಕೆ ವಿಜಯ್ ಕುಮಾರ್, ನಿವೃತ್ತ ಪ್ರಾಂಶುಪಾಲ ಹಾಗೂ ಸಂಘಟಕರಾದ ಶ್ರೀಮತಿ ಜಯಶೀಲ ಇವರಿಗೆ ಸನ್ಮಾನ ನಡೆಯಲಿದೆ.
ವಿದ್ಯಾರ್ಥಿಗಳಿಂದ ಭಾವಗಾನ ಸಿಂಚನ ಕಾರ್ಯಕ್ರಮ ನಡೆಯಲಿದೆ.