ಕಾಸರಗೋಡು: ಕಾಡು ಹಂದಿ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಪ ಟ್ಟಂತೆ ನಾಲ್ವರನ್ನು ಅರಣ್ಯ ಇಲಾಖೆ ಸಿಬಂದಿಗಳು ಬಂಧಿಸಿದ್ದಾರೆ. ರಾಜಪುರದ ತಂಬಾನ್ ( 58) , ಮಹೇಶ್ ( 45) , ಮಿಥುನ್ (26) ಹಾಗೂ ವಿಪಿನ್ ( 28) ಬಂಧಿತರು.
ರಾಜಪುರ ಅಯೋಟ್ ಎಂಬಲ್ಲಿ ಕಾಡು ಹಂದಿಯನ್ನು ಮಾಂಸ ಮಾಡುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದೆ.
ಉಪ್ಪಳ ಪರಿಸರದಿಂದ ಹಂದಿಯನ್ನು ಭೇಟೆಯಾಡಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.