ಕಾಸರಗೋಡು: ಹಿರಿಯ ಪೊಲೀಸ್ ಅಧಿಕಾರಿ, ಜಿಲ್ಲಾಧಿಕಾರಿ ಹಾಗೂ ರಾಜಕೀಯ ಪಕ್ಷಗಳ ಮುಖಂಡರನ್ನು ನಕಲಿ ನಂಬ್ರ ಮೂಲಕ ಮೊಬೈಲ್ ನಲ್ಲಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ತೃಶ್ಯೂರ್ ಮರತ್ತನ್ ಕೋಡ್ ನ ಕೆ.ಎಂ ಹಬೀಬ್ ರಹಮಾನ್( ೨೯) ಬಂಧಿತ. ಸಾಮಾಜಿಕ ಜಾಲಗಳಲ್ಲಿ ಈತ ಮರ್ಲಿ ಎಂದು ಹೆಸರನ್ನಿಟ್ಟುಕೊಂಡಿದ್ದ ಈತ ನಕಲಿ ಸಂಖ್ಯೆಗಳನ್ನು ಬಳಸಿ ವಾಟ್ಸಾಪ್ ಗ್ರೂಫ್ ಗಳನ್ನು ರಚಿಸಿದ್ದನು. ಅಲ್ಲದೆ ಅನೇಕ ವಿದ್ಯಾರ್ಥಿಗಳನ್ನು, ಯುವಕರನ್ನು ಸದಸ್ಯರನ್ನಾಗಿ ಮಾಡಿಕೊಂಡಿದ್ದನು . ಈತ ವಿದೇಶದಲ್ಲಿದ್ದು ಕೊಂಡು ಅಧಿಕಾರಿಗಳು, ರಾಜಕೀಯ ಪಕ್ಷದ ಮುಖಂಡರು ಮತ್ತು ಜನಪ್ರತಿನಿಧಿಗಳ ಮೊಬೈಲ್ ಗೆ ಕರೆ ಮಾಡಿ ನಿಂದಿಸಿ ಬೆದರಿಕೆ ಹಾಕುತ್ತಿದ್ದನು.
ಈತ ಕರೆಯ ಧ್ವನಿಯನ್ನು ಬಳಿಕ ವಾಟ್ಸಾಪ್ ಹಾಗೂ ಸಾಮಾಜಿಕ ಜಾಲ ತಾಣಗಳ ಮೂಲಕ ಪ್ರಚಾರ ಪಡಿಯುತ್ತಿದ್ದನು. ಈ ಬಗ್ಗೆ ನಿಗಾ ಇರಿಸಿದ್ದ ಪೊಲೀಸರು ಮೂಲವನ್ನು ಪತ್ತೆ ಹಚ್ಚಿ ಆರೋಪಿ ವಿದೇಶದಿಂದ ಊರಿಗೆ ಆಗಮಿಸುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.