ಕಾಸರಗೋಡು: ಬೈಕ್ ನಿಂದ ರಸ್ತೆ ಗೆಸೆಯಲ್ಪಟ್ಟು, ಲಾರಿಯಡಿಗೆ ಸಿಲುಕಿ ಗೃಹಿಣಿ ಯೋರ್ವರು ಮೃತಪಟ್ಟ ದಾರುಣ ಘಟನೆ ಶುಕ್ರವಾರ ಸಂಜೆ ಆದೂರು ಬಳಿ ನಡೆದಿದೆ.
ಆದೂರು ಪಾಂಡಿ ಅಂಬಟೆ ಮೂಲೆಯ ಎ.ಕೆ ಮುಹಮ್ಮದ್ ರವರ ಪತ್ನಿ ಅಮೀನಾ (45) ಮೃತ ಪಟ್ಟವರು. ಪತಿ ಹಾಗೂ ಮಗುವಿನ ಜೊತೆ ಬೈಕ್ ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಎದುರಿನಿಂದ ಅತೀ ವೇಗದಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಒಮ್ಮೆಲೆ ಬ್ರೇಕ್ ಹಾಕಿದಾಗ ಹಿಂಬದಿಯಲ್ಲಿದ್ದ ಅಮೀನಾ ರಸ್ತೆ ಗೆಸೆಯಲ್ಪಟ್ಟಿದ್ದು, ಈ ಸಂದರ್ಭದಲ್ಲಿ ಬಂದ ಲಾರಿ ಯಡಿಗೆ ಸಿಲುಕಿ ಸ್ಥಳ ದಲ್ಲೇ ಮೃತ ಪಟ್ಟರು.
ಪತಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಆದೂರು ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದು, ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.