ಕಾಸರಗೋಡು: ಹೈಟೆಕ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಬದಿಯಡ್ಕ ಠಾಣಾ ಪೊಲೀಸರು, 16 ಮಂದಿಯನ್ನು ಬಂಧಿಸಿದ್ದು, 78,030 ರೂ. ವನ್ನು ವಶಪಡಿಸಿಕೊಂಡಿದ್ದಾರೆ.
ಮಾನ್ಯ ಉಳ್ಳೋಡಿಯ ಕಾಡೊಂದರಲ್ಲಿ ರಹಸ್ಯವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಸೋಮವಾರ ಮುಂಜಾನೆ ಪೊಲೀಸರು ದಾಳಿ ನಡೆಸಿದ್ದಾರೆ. ಮಾನ್ಯದ ವಿಜಯ, ಕಲ್ಲಕಟ್ಟದ ರಮೇಶ್, ಕೊಡೊಂಬೆಳ್ಳೂರಿನ ಜಾನ್ಸನ್, ಕಲ್ಲಾರ್ ನ ಜೋಸ್, ಕೊಲ್ಲಂಗಾನದ ಕರುಣಾಕರ, ಕುಂಬಳೆಯ ಅಬೂಬಕರ್ ಸಿದ್ದಿಕ್, ಮಾನ್ಯ ದ ಅಬ್ಬಾಸ್, ಬದಿಯಡ್ಕದ ಹಾರಿಸ್, ಏಣಿಯೆರ್ಪುವಿನ ಸುರೇಶ್, ಮುರಳಿ ಕೊಲ್ಲಂಗಾನ, ಅಡ್ವಳ ನಿವಾಸಿ ವಿಠಲ, ಅಂಬಲತ್ತರ ದ ನಿ ಶಾದ್, ಕಾಸರಗೋಡು ನಿವಾಸಿ ಅಶೋಕ್ ಕುಮಾರ್, ಮೊಗ್ರಾಲ್ ಪುತ್ತೂರು ನಿವಾಸಿ ಅಬ್ದುಲ್ ರಹಮಾನ್, ಕಳ್ಳಾರು ನಿವಾಸಿ ವಿನೋದ್ ಬಂಧಿತರು.