News Kannada
Sunday, October 01 2023
ಕಾಸರಗೋಡು

ಕಾಸರಗೋಡು: ಇದೀಗ ನರಕಸದ್ರಶ್ಯವಾಗಿದೆ ಕಯ್ಯಾರ್ ಪರಂಬಳ – ಜೋಡುಕಲ್ಲು ರಸ್ತೆ

KASA
Photo Credit : By Author

ಕಾಸರಗೋಡು: ಕಯ್ಯಾರ್ ಪರಂಬಳ – ಜೋಡುಕಲ್ಲು ರಸ್ತೆ ಇದೀಗ ನರಕಸದ್ರಶ್ಯವಾಗಿ ಪರಿಣಮಿಸಿದ್ದು, ಸಂಚಾರವೇ ತೊಡಕಾಗಿ ಪರಿಣಮಿಸಿದೆ. ವರ್ಷಗಳಿಂದ ಈ ರಸ್ತೆಯೂ ಹೊಂಡಗಳಿಂದ ಸಂಚಾರ ಮಾತ್ರವಲ್ಲ ನಡೆದಾಡದ ಸ್ಥಿತಿಗೆ ತಲಪಿದೆ.

ಈ ರಸ್ತೆ ಮೂಲಕ ದಿನಂಪ್ರತಿ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಸಂಚಾರ ನಡೆಸುತ್ತಿದ್ದು , ಶಾಲೆ, ಚರ್ಚ್, ದೇವಸ್ಥಾನ , ಮಸೀದಿ ಸೇರಿದಂತೆ ಮೊದಲಾದ ಕೇಂದ್ರಗಳಿದ್ದು, ನೂರಾರು ವಾಹನಗಳು ಈ ರಸ್ತೆ ಮೂಲಕ ಸಂಚರಿಸುತ್ತಿದೆ.

ಆದರೆ ರಸ್ತೆಯ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಿಂಚಿತ್ತೂ ಗಮನ ಹರಿಸಿಲ್ಲ. ಇದೀಗ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಜಲ್ಲಿಗಳನ್ನು ಸಮೀಪದ ಕ್ರಷರ್ ನಿಂದ ಬ್ರಹತ್ ಗಾತ್ರದ ರಸ್ತೆಯಾಗಿ ಲಾರಿಗಳಲ್ಲಿ ಸಾಗಾಟ ಮಾಡಲಾಗುತ್ತಿದೆ . ಇಂತಹ ಲಾರಿಗಳು ನಿರಂತರ ಸಂಚಾರ ನಡೆಸುವುದರಿಂದ ರಸ್ತೆ ಬ್ರಹತ್ ಹೊಂಡಗಳಾಗಿ ಪರಿಣಮಿಸಿದೆ.

ರಸ್ತೆ ಸಂಚಾರ ಯೋಗ್ಯ ಗೊಳಿಸುವಂತೆ ಹಲವಾರು ಹೋರಾಟಗಳು ನಡೆದಿವೆ . ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ನೀಡಿದರೂ ಇನ್ನೂ ದುರಸ್ತಿಗೆ ಮುಂದಾಗಿಲ್ಲ. ರಸ್ತೆ ಅವ್ಯವಸ್ಥೆ ವಿರುದ್ಧ ಮತ್ತೆ ಪ್ರಟಿಭಟನೆ ನಡೆಸುವ ಬಗ್ಗೆ ನಾಗರಿಕರು ಚಿಂತನೆ ನಡೆಸಿದ್ದಾರೆ.

See also  ಉಡುಪಿ: ವಿಭಾಗ ಮಟ್ಟದ ದಸರಾ ವುಶು ಕ್ರೀಡಾಕೂಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು