ಕಾಸರಗೋಡು : ಎಂ.ಡಿ.ಎಂ.ಎ ಮಾದಕ ವಸ್ತು ಸಹಿತ ಮೂವರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದು , ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ.
ಉಪ್ಪಳ ಕೋಡಿಬೈಲ್ ನ ಮುಹಮ್ಮದ್ ಕಾಸಿಂ ( 43), ಮಂಜೇಶ್ವರ ಮಚ್ಛಂಪಾಡಿಯ ಅಬ್ದುಕ್ ನವಾಜ್ ( 28) ಮತ್ತು ಉಪ್ಪಳ ಬಪ್ಪಾಯಿತ್ತೊಟ್ಟಿಯ ಮುಹಮ್ಮದ್ ನಾಸಿರ್ ( 33) ಬಂಧಿತರು.
ಇವರ ಬಳಿಯಿಂದ 18. 2 ಗ್ರಾಂ ಎಂ.ಡಿ.ಎಂ.ಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಸೋಮವಾರ ರಾತ್ರಿ ಉಪ್ಪಳ ಮಣ್ಣಂಗುಯಿ ಸ್ಟೇಡಿಯಂ ಬಳಿ ಇವರನ್ನುಬಂಧಿಸಿ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಸ್ಕೂಟರನ್ನು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ.. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಯಿತು. ತಂಡವೊಂದಕ್ಕೆ ಹಸ್ತಾಂ ತರಿಸಲು ತಲಪಿದ್ದಾಗಿ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ.