ಕಾಸರಗೋಡು: ರಾಜ್ಯದಲ್ಲಿ ಕಳೆದ ಆರು ವರ್ಷಗಳಲ್ಲಿ ಹತ್ತೂವರೆ ಲಕ್ಷ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಿಗೆ ಸೇರ್ಪಡೆಗೊಂಡಿದ್ದಾರೆ.
ಶಿಕ್ಷಣ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ಇದಕ್ಕೆ ಕಾರಣ ಎಂದು ಕೇರಳ ಶಿಕ್ಷಣ ಸಚಿವ ವಿ . ಶಿವನ್ ಕುಟ್ಟಿ ಅಭಿಪ್ರಾಯಪಟ್ಟರು. ಅವರು ಮಂಗಳವಾರ ಮಧೂರು ಸಮೀಪದ ಶಿರಿಬಾಗಿಲು ಸರಕಾರಿ ವೆಲ್ಫೇರ್ ಎಲ್ ಪಿ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಅಭಿಯಾನ ಮತ್ತು ವಿದ್ಯಾಕಿರಣಂ ಯೋಜನೆ ಯಶಸ್ವಿ ಕಂಡಿದೆ. ಇದರ ಫಲವಾಗಿ ಸರಕಾರಿ ಶಾಲಗಳತ್ತ ತು ವಿದ್ಯಾರ್ಥಿಗಳು ಮುಂದೆ ಬರುತ್ತಿದ್ದಾರೆ. ಶಿಕ್ಷಣ ವಲಯಕ್ಕೆ ಮೂರು ಸಾವಿರ ಕೋಟಿ ರೂ. ಗಳ ಮೂಲಭೂತ ಸೌಲಭ್ಯ ಈ ಅವಧಿಯಲ್ಲಿ ನಡೆದಿದೆ ಎಂದು ಹೇಳಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಗೋಪಾಲಕೃಷ್ಣ, ಮಧೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸ್ಮಿಜಾ ವಿನೋದ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಸೂರ್ಲು,ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋದಾ ಎಸ್.ನಾಯ್ಕ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಗಟ್ಟಿ, ಜಿಲ್ಲಾ ಪಂಚಾಯಟ್ ಸದಸ್ಯೆ ಜಾಸ್ಮಿನ್ ಕಬೀರ್, ಕಾಸರಗೋಡು ಬ್ಲಾಕ್ ಪಂಚಾಯತ್ ಸದಸ್ಯೆ ಜಮೀಲಾ ಅಹಮ್ಮದ್ , ಮಧೂರು ಗ್ರಾಮ ಪಂಚಾಯತ್ ಸದಸ್ಯರಾದ ಸಿ.ಎಂ.ಬಶೀರ್, ಹಬೀಬ್ ಚೆಟ್ಟುಂಗುಝಿ, ಸಿ.ಉದಯಕುಮಾರ್, ಅಬ್ದುಲ್ ಜಲೀಲ್ ಚೆಟ್ಟುಂಗುಝಿ, ಇ.ಅಂಬಿಲಿ, ಕೆ.ರತೀಶ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ.ವಾಸು, ಡಯಟ್ ಕಾಸರಗೋಡು ಪ್ರಭಾರ ಪ್ರಾಂಶುಪಾಲ ರಘುರಾಮ ಭಟ್, ಎಸ್.ಎಸ್.ಕೆ.ಜಿಲ್ಲಾ ಯೋಜನಾ ಸಂಯೋಜಕ ಡಿ. ನಾರಾಯಣ, ಜಿಲ್ಲಾ ಶಿಕ್ಷಣಾಧಿಕಾರಿ ಎನ್.ನಂದಿಕೇಶನ್, ಕಾಸರಗೋಡು ಉಪಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟಿನ್ ಬರ್ನಾರ್ಡ್, ಟಿ.ಪ್ರಕಾಶ್, ಪಿಟಿಎ ಅಧ್ಯಕ್ಷ ಝಕರಿಯಾ ಕುನ್ನಿಲ್, ಉಪಾಧ್ಯಕ್ಷ ಟಿ.ಕೆ.ಪ್ರದೀಪ್, ಎಂಪಿಟಿ ಎ. ಅಧ್ಯಕ್ಷ ಸುಮಯ್ಯ, ಎಸ್ಎಂಸಿ ಅಧ್ಯಕ್ಷ ರಾಧಾಕೃಷ್ಣ ಉಳಿಯತ್ತ ಡ್ಕ , ವಿವಿಧ ಪ್ರತಿನಿಧಿಗಳು ರಾಜಕೀಯ ಪಕ್ಷಗಳು ಎ. ರವೀಂದ್ರನ್ , ರಾಜೀವನ್ ನಂಬಿಯಾರ್, ಹ್ಯಾರಿಸ್ ಚೂರಿ, ಹಸೈನಾರ್ ನುಳ್ಳಿಪ್ಪಾಡಿ, ಕರೀಂ ಮೇಲ್ಪಾರ, ಅಬ್ಬಾಸ್ ಪಾರೆಕಟ್ಟೆ , ರವೀಂದ್ರ ರೈ, ಶರೀಫ್ ಚೂರಿ, ಖಾಲಿದ್ ಮತ್ತು ವಿ.ಕೆ.ರಮೇಶ್ ಮಾತನಾಡಿದರು. ಲೋಕೋಪಯೋಗಿ ಕಟ್ಟಡ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ವಿ.ಪಿ.ಮುಹಮ್ಮದ್ ಮುನೀರ್ ವರದಿ ಮಂಡಿಸಿದರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷಾಧಿಕಾರಿ ಇ.ಪಿ.ರಾಜಮೋಹನ್ ಸ್ವಾಗತಿಸಿ, ಶಾಲಾ ಮುಖ್ಯೋಪಾಧ್ಯಾಯಿನಿ ಸಿ.ಎಚ್.ಶಶಿಕಲಾ ವಂದಿಸಿದರು.