ಕಾಸರಗೋಡು: ಯುವಕನೋರ್ವ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತೃಕ್ಕರಿಪುರದಲ್ಲಿ ನಡೆದಿದೆ.
ಮಟ್ಟಮ್ಮಲ್ ನ ಎಂ . ಪ್ರಿಯೇಶ್ ( ೩೧) ಮೃತಪಟ್ಟವರು. ಆದಿತ್ಯವಾರ ರಾತ್ರಿ ಮೊಬೈಲ್ ಗೆ ಬಂದ ಕರೆ ಬಳಿಕ ಮನೆಯಿಂದ ಹೊರ ತೆರಳಿದ್ದು ಮರಳಿ ಮನೆಗೆ ಬಂದಿರಲಿಲ್ಲ. ಸೋಮವಾರ ಬೆಳಿಗ್ಗೆ ಮನೆಯ ಆಲ್ಪ ದೂರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಫ್ಯಾಂಟ್ ಮಾತ್ರ ಧರಿಸಿದ್ದಾರೆ. ಪ್ರಿಯೇಶ್ ತೆರಳಿದ್ದ ಬೈಕ್ ಮೃತದೇಹದ ಬಳಿಯೇ ಪತ್ತೆಯಾಗಿದೆ.
ಕೊಲೆ ಎಂಬ ಅನುಮಾನ ಉಂಟಾಗಿದೆ. ಚಂದೇರ ಪೊಲೀಸರು ಮಹಜರು ನಡೆಸಿದ್ದು , ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಪ್ರಿಯೇಶ್ ಚಾಲಕರಾಗಿ ದುಡಿಯುತ್ತಿದ್ದರು . ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.