ಕಾಸರಗೋಡು: ತಮಿಳುನಾಡಿನ ಏರ್ವಾಡಿ ದರ್ಗಾಕ್ಕೆ ಝಿಯಾರತ್ ಗೆ ತೆರಳಿದ್ದ ಪೈವಳಿಕೆಯ ವಿದ್ಯಾರ್ಥಿಯೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಪೈವಳಿಕೆ ದೇವಕ್ಕಾನದ ಮುಹಮ್ಮದ್ ಹನೀಫ್ ಹಾಜಿ ರವರ ಪುತ್ರ ಅನ್ಸಾಫ್ ( ೧೮) ಮೃತಪಟ್ಟ ವಿದ್ಯಾರ್ಥಿ. ಮಂಜೇಶ್ವರ ಮಳ್ ಹರ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದನು. ಏರ್ವಾಡಿ ಮುತ್ತುಪೇಟ್ ನ ಕೆರೆಯಲ್ಲಿ ಸ್ನಾನಕ್ಕಿಲ್ದ ಸಂದರ್ಭದಲ್ಲಿ ಈ ದುರಂತ ನಡೆದಿದೆ.
ಮೂರು ದಿನಗಳ ಹಿಂದೆ ಅನ್ಸಾಫ್ ಸೇರಿದಂತೆ ಸುಮಾರು ೫೦ ವಿದ್ಯಾರ್ಥಿಗಳು ತಮಿಳುನಾಡಿನ ವಿವಿಧ ಮಸೀದಿಗಳಲ್ಲಿ ಝಿಯಾರತ್ ಗಾಗಿ ತೆರಳಿದ್ದರು ಗುರುವಾರ ಬೆಳಿಗ್ಗೆ ಇತರ ವಿದ್ಯಾರ್ಥಿಗಳ ಜೊತೆ ಕೆರೆಯಲ್ಲಿ ಸ್ನಾನಕ್ಕಿಳಿದಾಗ ಅನ್ಸಾಫ್ ಮುಳುಗಿದ್ದು, ಸ್ಥಳಕ್ಕೆ ಆಗಮಸಿದ ಅಗ್ನಿಶಾಮಕ ದಳದ ಸಿಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದರು.
ಪೋಲೀಸರ ಮಹಜರು , ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹ ಊರಿಗೆ ತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.