ಕಾಸರಗೋಡು: 19 ರ ಹರೆಯದ ಯುವತಿಗೆ ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆಯೊಂದು ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೂವರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಮಧೂರು ಪಟ್ಲದ ಜೆ. ಶೈನಿತ್ ಕುಮಾರ್ (30), ಉಪ್ಪಳ ಮಂಗಲ್ಪಾಡಿ ಯ ಮೋಕ್ಷಿತ್ ಶೆಟ್ಟಿ (43) ಮತ್ತು ಉಳಿಯತ್ತಡ್ಕದ ಎನ್.ಪ್ರಶಾಂತ್ (27) ಬಂಧಿತರು. ಕಾಸರಗೋಡು ಮಹಿಳಾ ಠಾಣಾ ಇನ್ಸ್ ಪೆಕ್ಟರ್ ಪಿ . ಚಂದ್ರಿಕಾ ನೇತೃತ್ವ ದ ತಂಡವು ಇವರನ್ನು ಬಂಧಿಸಿದೆ. ಮಧ್ಯವರ್ತಿಯಾಗಿದ್ದ ಕಾಞ೦ಗಾಡಿನ ಮಹಿಳೆಯೋರ್ವಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಆರ್ಥಿಕ ವಾಗಿ ಹಿಂದುಳಿದ ಕುಟುಂಬದ ಯುವತಿಗೆ ಆಮಿಷ ತೋರಿಸಿ ತಂಡವು ಈ ಕೃತ್ಯ ನಡೆಸಿದ್ದು, ಪಾನೀಯ ದಲ್ಲಿ ಮಾದಕ ವಸ್ತು ಬೆರೆಸಿ ನೀಡಿ ಅತ್ಯಾಚಾರ ನಡೆಸಲಾಗಿದೆ.
ನೆರೆಮನೆಯ ಯುವಕನೋರ್ವ ಈತನನ್ನು ಪ್ರೀತಿಸುವ ನಾಟಕವಾಡಿ ಬಳಿಕ ವಿವಾಹವಾಗುವ ಭರವಸೆ ನೀಡಿ ವಿವಿಧೆಡೆಗೆ ಕರೆದೊಯ್ದಿದ್ದು , ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದಲ್ಲದೆ ಮಧ್ಯವರ್ತಿಯಾದ ಮಹಿಳೆ ಮೂಲಕ ಇತರರಿಗೂ ಯುವತಿಯನ್ನು ಒಪ್ಪಿಸಿದ್ದು ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ತನಿಖೆಯಿಂದ ತಿಳಿದುಬಂದಿದೆ .
ಕಾಸರಗೋಡು , ಮಂಗಳೂರು , ಚೆರ್ಕಳ , ತೃಶ್ಯೂರು ಮೊದಲಾದೆಡೆಗಳಲ್ಲಿನ ವಸತಿಗ್ರಹಗಳಲ್ಲಿ ತಂಗಿ ಅತ್ಯಾಚಾರ ನಡೆಸಲಾಗಿದೆ. ನಿರಂತರವಾಗಿ ಅತ್ಯಾಚಾರಕ್ಕೊಳಗಾದ ಹಿನ್ನಲೆಯಲ್ಲಿ ಮಾನಸಿಕ – ಅರೋಗ್ಯ ಸಮಸ್ಯೆ ತಲೆದೋರಿದ್ದು , ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ನಡೆಸಿದ ಕೌನ್ಸಿಲಿಂಗ್ ನಡೆಸಿದ್ದು , ಈ ಸಂದರ್ಭದಲ್ಲಿ ಬೆಚ್ಚಿ ಬೀಳಿಸುವ ಮಾಹಿತಿಗಳು ಹೊರಬಿದ್ದಿವೆ.
ಬಳಿಕ ಪೊಲೀಸರು ಯುವತಿಯಿಂದ ಮಾಹಿತಿ ಪಡೆದು ತನಿಖೆ ನಡೆಸಿದ್ದರು. ಕೃತ್ಯದಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಮಧ್ಯವರ್ತಿಯಾಗಿದ್ದ ಮಹಿಳೆಯ ವಿಚಾರಣೆ ನಡೆಸುತ್ತಿದ್ದಾರೆ.