News Kannada
Monday, February 06 2023

ಕಾಸರಗೋಡು

ಕಾಸರಗೋಡು: ಕುಖ್ಯಾತ ಆರೋಪಿಯೋರ್ವನ ಬಂಧನ

Kasargod: Notorious accused arrested
Photo Credit : By Author

ಕಾಸರಗೋಡು: ಕುಖ್ಯಾತ ಆರೋಪಿಯೋರ್ವನನ್ನು ಸಿನಿಮೀಯ ಶೈಲಿಯಲ್ಲಿ ಕಾಸರಗೋಡು ಪೊಲೀಸರು ಬಂಧಿಸಿದ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಪಡನ್ನಕ್ಕಾಡ್ ನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಅಂಬಲತ್ತರದ ಬಿ. ರಂಶೀದ್ ಬಂಧಿತ ಆರೋಪಿ. ಕಾಫಾ ಕಾಯ್ದೆಯನ್ನು ಹೂಡಿ ಈತನನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿತ್ತು .

ಈತ ಗುರುವಾರ ಮಧ್ಯಾಹ್ನ ಕಾಸರಗೋಡಿಗೆ ಆಗಮಿಸುತ್ತಿರುವುದಾಗಿ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಪಡನ್ನಕ್ಕಾಡ್ ಮೇಲ್ಸೇತುವೆಯಲ್ಲಿ ವಾಹನ ತಡೆದು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .

ಈತನ ಬಳಿಯಿಂದ ೧. ೮೮ ಗ್ರಾಂ ಎಂ ಡಿ ಎಂ ಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ . ಕಳವು, ಹೊಡೆದಾಟ , ಮಾದಕವಸ್ತು ಸಾಗಾಟ ಸೇರಿದಂತೆ ಹಲವು ಪ್ರಕರಣಗಳ ಲ್ಲಿ ಶಾಮೀಲಾಗಿರುವ ಈತನನ್ನು ಬಂಧಿಸಿದ್ದ ಪೊಲೀಸರು ಕಾಫಾ ಕಾಯ್ದೆ ಹೂಡಿ ಗಡಿಪಾರು ಮಾಡಲಾಗಿತ್ತು . ಕಾಸರಗೋಡು ಜಿಲ್ಲೆಗೆ ಪ್ರವೇಶಿಸದಂತೆ ಈತನಿಂದ ನಿರ್ಬಂಧ ಹೇರಲಾಗಿತ್ತು . ಈ ಆದೇಶ ಉಲ್ಲಂಘಿಸಿ ಈತ ಜಿಲ್ಲೆಗೆ ಪ್ರವೇಶಿಸಿದ್ದು , ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತ ಸಂಚರಿಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ . ರಂಶೀದ್ ಗೆ ನೇರವಾದ ಝುಬೈರ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಕಾಸರಗೋಡು : ಮಂಗಳವಾರ 340 ಮಂದಿಗೆ ಸೋಂಕು ದೃಢ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು