ಕಾಸರಗೋಡು: ಕಾಸರಗೋಡಿನ ಸರಗೋಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಸಾರುವ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವ ನಾಳೆ (೨೪) ಯಿಂದ ಆರಂಭಗೊಳ್ಳಲಿದೆ . ಬೆಳಿಗ್ಗೆ ೧೦ ಗಂಟೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉತ್ಸವಕ್ಕೆ ಚಾಲನೆ ನೀಡುವರು.
ಡಿಸೆಂಬರ್ 24 ರಿಂದ ಜನವರಿ 2 ರವರೆಗೆ 10 ದಿನಗಳ ಕಾಲ ಉತ್ಸವ. ಪ್ರವಾಸೋದ್ಯಮ ಇಲಾಖೆ ಮತ್ತು ಬೇಕಲ ರೆಸಾರ್ಟ್ಗಳ ಅಭಿವೃದ್ಧಿ ನಿಗಮ, ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿ, ಕುಟುಂಬಶ್ರೀ ಮತ್ತು ಸ್ಥಳೀಯ ಯಾಡಳಿತ ಸಂಸ್ಥೆಗಗಳ ನೇತೃತ್ವದಲ್ಲಿ ಬೀಚ್ ಉತ್ಸವ ನಡೆಯಲಿದೆ.
ಬೇಕಲ ಕೋಟೆ ಮತ್ತು ಕಡಲತೀರದಲ್ಲಿ 10 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಸುಮಾರು ಐದು ಲಕ್ಷ ಕ್ಕೂ ಅಧಿಕ ಜನರು ಆಗಮಿಸುವ ನಿರೀಕ್ಷೆಯಿದೆ.