News Kannada
Monday, February 06 2023

ಕಾಸರಗೋಡು

ಕಾಸರಗೋಡು: ಬೇಳದಲ್ಲಿ ಅದ್ದೂರಿಯಾಗಿ ನಡೆದ 17ನೇ ಕವಿತಾ ಫೆಸ್ತ್

Photo Credit : By Author

ಕಾಸರಗೋಡು: ಕವಿತಾ ಟ್ರಸ್ಟ್ ವತಿಯಿಂದ ವರ್ಷಂಪ್ರತಿ ನಡೆಯುವ ’ಕವಿತಾ ಫೆಸ್ತ್’ ಈ ಭಾರಿ ಕಾಸರಗೋಡು ಜಿಲ್ಲೆಯ ಬೇಳದಲ್ಲಿ ಅದ್ದೂರಿಯಾಗಿ ನಡೆಯಿತು.

ಜನೆವರಿ 8 ಭಾನುವಾರ ದಿನಪೂರ್ತಿ ನಡೆದ ಕಾರ್ಯಕ್ರಮನ್ನು ಕೊಂಕಣಿ ಬರಹಗಾರ ಹಾಗೂ ಪತ್ರಕರ್ತರಾದ ಆಸ್ಟಿನ್ ಡಿ ಸೋಜಾ ಪ್ರಭು ಉದ್ಘಾಟಿಸಿದರು. ಯುವ ಬರಹಗಾರರಾದ ಸ್ಟ್ಯಾನಿ ಬೇಳ ಹಾಗೂ ಕೆಬಿಎಂ, ಗೋವಾ ಇದರ ಅಧ್ಯಕ್ಷರಾದ ಅನ್ವೇಶ ಸಿಂಗ್ಭಾಳ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದ ಭಾಗವಾಗಿ ನೆಲ್ಸನ್ ಹಾಗೂ ಲವೀನಾ ರೋಡ್ರಿಕ್ಸ್ ಪ್ರಾಯೋಜಕತ್ವದ ಚಾಫ್ರಾ ದೆಕೋಸ್ತಾ ಸ್ಮಾರಕ ಅಖಿಲ ಭಾರತ ಕವನ ವಾಚನ ಸ್ಪರ್ಧೆ ನಡೆಯಿತು.

ಕೊಂಕಣಿ ಬರಹಗಾರ, ನ್ಯಾಯವಾದಿ ಸಂತೋಶ್ ಪೆರ್ಲ ಹಾಗೂ ಕೊಂಕಣಿ-ಕನ್ನಡ ಕವಿ ವಿಲ್ಸನ್ ಕಟೀಲ್ ಅವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ನಡೆಯಿತು.

ಕವಿತಾ ಟ್ರಸ್ಟ್ ಟ್ರಸ್ಟಿಗಳಾದ ವಿಲ್ಲಿಯಂ ಪಾಯ್ಸ್ ಹಾಗೂ ಟೈಟಸ್ ನೊರೊನ್ಹಾ ಸಂವಾದವನ್ನು ನಡೆಸಿಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೊಂಕಣಿ ಕವಿ ಹಾಗೂ ಸಾಹಿತಿಗಳಾದ ವಿಲ್ಸನ್ ಕಟೀಲ್ ರಚನೆಯ ’ಚಿತುರ್ಲೆಚೆ ಅಚ್ಛೇ ದಿನ್’ ಕವನ ಸಂಕಲನವನ್ನು ಬಿಡುಗಡೆ ಮಾಡಲಾಯಿತು.

ನಿರಾಕರ್ ಎಜುಕೇಶನ್ ಸೊಸಾಯ್ಟಿ ಅಧ್ಯಕ್ಷರಾದ ಪ್ರಶಾಂತ್ ನಾಯ್ಕ್ ಅವರು ಸಮರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದರು. ಗೀತಾರಚನೆಕಾರ ರತ್ನಮಾಲ ದಿವಾಕರ್ ಹಾಗೂ ಅನಿವಾಸಿ ಉಧ್ಯಮಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಹಿರಿಯ ಕೊಂಕಣಿ ಕವಯತ್ರಿ ಇಂದು ಅಶೋಕ್ ಗೇರುಸೊಪ್ಪೆಯವರಿಗೆ ಮಥಾಯಸ್ ಕುಟಾಮ್ ಕವಿತಾ ಪ್ರಶಸ್ತಿ ಪ್ರಧಾನ ಮಾಡಲಾಯಿತು.

See also  ಕಾಸರಗೋಡು: ಪುನರ್ವಸತಿ ಗ್ರಾಮದ ಮೊದಲ ಹಂತವು ಜೂನ್‌ನಲ್ಲಿ ಪೂರ್ಣಗೊಳ್ಳಲಿದೆ- ಆರ್.ಬಿಂದು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು