ಕಾಸರಗೋಡು: ಕಂಪ್ರೆಸರ್ ಟ್ರಾಕ್ಟರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ಪೈವಳಿಕೆ – ಚೇವಾರ್ ರಸ್ತೆಯ ಕಟ್ಟದಮನೆ ಸೇತುವೆ ಬಳಿ ನಡೆದಿದೆ.
ಚಾಲಕ ನೇಪಾಳ ಮೂಲದ ರುಂಕಾವ್ ನ ಸುರೇಶ್ ಪೊನ್ (28) ಮೃತ ಪಟ್ಟವರು.ಜೊತೆಗಿದ್ದ ನೇಪಾಳದ ವಾಸ್ಪತಿ ತಾಪ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ಮಧ್ಯಾಹ್ನ ಈ ಅಪಘಾತ ನಡೆದಿದೆ. ನಿಯಂತ್ರಣ ತಪ್ಪಿದ ಟ್ರಾಕ್ಟರ್ ಮಾಗುಚಿದ ಪರಿಣಾಮ ಅದರಡಿ ಸಿಲುಕಿದ್ದ ಸುರೇಶ್ ರನ್ನು ನಾಗರಿಕರು ಹಿರ ತೆಗೆದು ಬಂದ್ಯೋಡಿನ ಆಸ್ಪತ್ರೆಗೆ ತಲಪಿಸಿದ್ದು , ಸ್ಥಿತಿ ಚಿಂತಾಜನಕ ವಾದುದರಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಸುರೇಶ್ ಕೆಲಸಕ್ಕೆ ಸೇರಿಕೊಂಡಿದ್ದರು ಎನ್ನಲಾಗಿದೆ.
ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.