ಕಾಸರಗೋಡು: ಶಾಲಾ ಬಸ್ಸು ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ದಾರುಣ ಘಟನೆ ಇಂದು ಬೆಳಿಗ್ಗೆ ಮಂಜೇಶ್ವರ ಸಮೀಪದ ಮಿಯಪದವಿನಲ್ಲಿ ನಡೆದಿದೆ.
ಮೃತಪಟ್ಟವರನ್ನು ಮಿಯಾಪದವು ದರ್ಬೆಯ ಹರೀಶ್ ರವರ ಪುತ್ರ ಪ್ರೀತೇಶ್ ಶೆಟ್ಟಿ ( 19) ಮತ್ತು ಬೆಜ್ಜಂಗಳ ಸುರೇಶ್ ರವರ ಪುತ್ರ ಅಭಿಷೇಕ್ ಎಂ .(19) ಮೃತ ಪಟ್ಟವರು. ಪ್ರೀತೇಶ್ ಮಂಗಳೂರಿನ ದೇವಿ ಕಾಲೇಜು ಹಾಗೂ ಅಭಿಷೇಕ್ ಪ್ರೇರಣಾ ಕಾಲೇಜಿನ ಡಿಗ್ರಿ ವಿದ್ಯಾರ್ಥಿಗಳಾಗಿದ್ದರು.
ಮಿಯಪದವು ಸಮೀಪದ ಬಾಳಿ ಯೂರು ಎಂಬಲ್ಲಿ ಈ ಅಪಘಾತ ನಡೆದಿದೆ. ಖಾಸಗಿ ಶಾಲೆಯ ಬಸ್ಸು ಮತ್ತು ಬೈಕ್ ನಡುವೆ ಅಪಘಾತ ನಡೆದಿದೆ. ವಿದ್ಯಾರ್ಥಿಗಳು ಬೈಕ್ ನಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ನಡೆದಿದೆ. ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದು, ಮಂಜೇಶ್ವರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.