News Kannada
Thursday, March 23 2023

ಕಾಸರಗೋಡು

ಕಾಸರಗೋಡು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕಿವಿಗೆ ಕಚ್ಚಿದ ಆರೋಪಿ ಬಂಧನ

Kasargod: Man arrested for biting police sub-inspector's ear
Photo Credit : By Author

ಕಾಸರಗೋಡು: ಕಸ್ಟಡಿ ಗೆ ಪಡೆದು ಕರೆದೊಯ್ಯುತ್ತಿದ್ದಾಗ ಆರೋಪಿಯೋರ್ವ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವರ ಕಿವಿಯನ್ನು ಕಚ್ಚಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮಧೂರು ಅರಂತೋಡಿನ ಸ್ಟ್ಯಾನಿ ರೊಡ್ರಿಗಸ್ ( ೪೫) ಈ ಕೃತ್ಯ ನಡೆಸಿದ್ದು , ಕಾಸರಗೋಡು ಠಾಣಾ ಸಬ್ ಇನ್ಸ್ ಪೆಕ್ಟರ್ ಎಂ. ವಿ ವಿಷ್ಣು ನಾಥ್ ರವರ ಕಿವಿಗೆ ಕಚ್ಚಿ ಗಾಯಗೊಳಿಸಿದ್ದಾನೆ. ಗುರುವಾರ ಸಂಜೆ ಘಟನೆ ನಡೆದಿದೆ.

ಉಳಿಯತ್ತಡ್ಕ ದಲ್ಲಿ ಸ್ಟ್ಯಾನಿ ಚಲಾಯಿಸುತ್ತಿದ್ದ ಬೈಕ್ ವ್ಯಾನ್ ಗೆ ಡಿಕ್ಕಿಹೊಡೆದಿದೆ. ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆದಿದೆ. ಸ್ಟ್ಯಾನಿ ಪಾನಮತ್ತನಾಗಿರುವುದಾಗಿ ಆರೋಪಿಸಿ ಗುಂಪೊಂದು ತಡೆದಿದ್ದು, ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಸ್ಟ್ಯಾನಿಯನ್ನು ವಶಕ್ಕೆ ಪಡೆದು ಪೊಲೀಸ್ ಜೀಪಿಗೇರಿಸಿ ಠಾಣೆ ಗೆ ಕೊಂಡೊಯ್ಯುತ್ತಿದ್ದಾಗ ಎಸ್. ಐ ನ ಕಿವಿಗೆ ಕಚ್ಚಿದನೆನ್ನಲಾಗಿದೆ.

ಬಳಿಕ ಎಸ್ . ಐ ವಿಷ್ಣುನಾಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಸ್ಟ್ಯಾನಿ ರೊಡ್ರಿಗಸ್ ನನ್ನು ಪೊಲೀಸರು ಬಂಧಿಸಿದರು.

See also  ಕಾಸರಗೋಡು: ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು