ಕಾಸರಗೋಡು: ಮಾದಕ ವಸ್ತು ಸಾಗಾಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ . ಮಂಗಳೂರು ಕೂಳೂರಿನ ಮುಹಮ್ಮದ್ ನೌಫಾಲ್ (33) ಮತ್ತು ತಲಪಾಡಿ ನೇರ್ಲಪ್ಪಾಡಿ ಯ ಕೆ. ಬಿ ಫೈಝಲ್ (26) ಬಂಧಿತರು. ಇವರು ಎಂ ಡಿ ಎಂ ಎ ಮಾದಕ ವಸ್ತು ಸಾಗಾಟ ದ ಏಜೆಂಟ್ ಗಳೆಂದು ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಮಂಜೇಶ್ವರ ಪೊಲೀಸರು ಮೂವರನ್ನು ಎಂ ಡಿ ಎಂ ಎ ಮಾದಕ ವಸ್ತು ಸಹಿತ ಪೊಲೀಸರು ಬಂಧಿಸಿದ್ದರು. ಇವರಿಗೆ ಈ ಇಬ್ಬರು ಮಾದಕ ವಸ್ತು ತಲ ಪಿಸಿದ್ದರು. ಬಂಧಿತ ಮೂವರು ನೀಡಿದ ಸುಳಿವು ಆಧಾರಿಸಿ ತನಿಖೆ ನಡೆಸಿದ ಪೊಲೀಸರು ಇಬ್ಬರು ಏಜೆಂಟ್ ರ್ ಗಳನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ನೌಫಲ್ ಮತ್ತು ಫೈಝಲ್ ಒಂದು ಲಕ್ಷ ರೂ. ಗೆ ಮಾದಕ ವಸ್ತು ತಲಪಿ ಸಿದ್ದಾಗಿ ಮಾಹಿತಿ ನೀಡಿದ್ದರು. ಮೊಬೈಲ್ ನಂಬ್ರ ದ ಲೊಕೇಶನ್ ಕೇಂದ್ರೀಕರಿಸಿ ನಡೆಸಿದ ತನಿಖೆ ಯಿಂದ ಇಬ್ಬರನ್ನು ಬಂಧಿಸಲಾಗಿದೆ . ಉಪ್ಪಳ , ಕಾಸರಗೋಡು , ಮಂಜೇಶ್ವರ ಮೊದಲಾದೆಡೆ ಇವರು ಮಾದಕ ವಸ್ತು ವನ್ನು ಸರಬರಾಜು ಮಾಡು ತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.