ಕಾಸರಗೋಡು: ಹುಟ್ಟು ಹಬ್ಬದ ದಿನದಂದೇ ಚೂಡಿದಾರ್ ನ ಶಾಲ್ ಯಂತ್ರಕ್ಕೆ ಸಿಲುಕಿ ಕಾರ್ಮಿಕೆಯೊರ್ವಳು ದಾರುಣವಾಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಮಂಜೇಶ್ವರ ತೂಮಿನಾಡಿನಲ್ಲಿ ನಡೆದಿದೆ.
ಮೃತದುರ್ದೈವಿ ಜಯಶೀಲ ( ೨೪) ಮೃತಪಟ್ಟವರು. ತೂಮಿನಾಡಿನಲ್ಲಿರುವ ಬೇಕರಿಯೊಂದರ ಕಾರ್ಮಿಕೆಯಾಗಿದ್ದು, ಎಂದಿನಂತೆ ಬೇಕರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಯಂತ್ರಕ್ಕೆ ಚೂಡಿದಾರ್ ಶಾಲು ಸಿಲುಕಿ ದುರ್ಘಟನೆ ನಡೆದಿದೆ.
ಗಂಭೀರ ಸ್ಥಿತಿಯಲ್ಲಿದ್ದ ಜಯಶೀಲರನ್ನು ಅಲ್ಲಿದ್ದವರು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಇಂದು ಜಯಶೀಲರ ಹುಟ್ಟು ಹಬ್ಬವಾಗಿದ್ದು, ಇದರ ನಡುವೆ ದಾರುಣ ಘಟನೆ ನಡೆದಿದೆ. ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿರಿಸಲಾಗಿದೆ.