ಕಾಸರಗೋಡು: ಟ್ರಾನ್ಸ್ ಫಾರ್ಮರ್ ಕಳವುಗೈದ ಪ್ರಕರಣಕ್ಕೆ ಇಬ್ಬರನ್ನು ಚಿತ್ತಾರಿಕ್ಕಾಲ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ನಿವಾಸಿಗಳಾದ ಮಣಿಕಂಠನ್ ( ೩೧) ಮತ್ತು ಪುಷ್ಪರಾಜ್ ( ೪೩) ಬಂಧಿತರು. ಕೇರಳ ವಿದ್ಯುನ್ಮ೦ಡಲಿಯ ನಲ್ಲೊಂಬು ಸೆಕ್ಷನ್ ಕಚೇರಿ ವ್ಯಾಪ್ತಿಯಲ್ಲಿ ಅಳವಡಿಸಲೆಂದು ತಂದಿಡಲಾಗಿದ್ದ ಹೊಸ ಟ್ರಾನ್ಸ್ ಫಾರ್ಮರನ್ನು ಫೆ. ೨೮ ರಂದು ರಾತ್ರಿ ಕಳವು ಗೈಯ್ಯಲಾಗಿತ್ತು. ಈ ಬಗ್ಗೆ ಸಹಾಯಕ ಇಂಜಿನಿಯರ್ ಚಿತ್ತಾರಿಕಾಲ್ ಪೊಲೀಸರಿಗೆ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಟ್ರಾನ್ಸ್ ಫಾರ್ಮರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳು ನೀಲೇಶ್ವರ ಪಳ್ಳಿಕೆರೆ ಕೇಂದ್ರೀಕರಿಸಿ ಗುಜರಿ ಸಾಮಾಗ್ರಿ ವ್ಯಾಪಾರ ನಡೆಸುತ್ತಿದ್ದರು .