ಕಾಸರಗೋಡು: ಕೋಣ ತಿವಿತಕ್ಕೆ ಓರ್ವ ಮೃತಪಟ್ಟು, ಹಲವು ಮಂದಿ ಗಾಯಗೊಂಡ ಘಟನೆ ಗುರುವಾರ ಸಂಜೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ.
ಕರ್ನಾಟಕ ಚಿತ್ರದುರ್ಗದ ಸಿದ್ದಿಕ್ ( ೨೨) ಮೃತಪಟ್ಟವರು. ಮೊಗ್ರಾಲ್ ಪುತ್ತೂರಿನ ಕಸಾಯಿಖಾನೆಗೆ ತರಲಾಗಿದ್ದ ಕೋಣ ವಾಹನದಿಂದ ಕೆಳಗಿಳಿಸುತ್ತಿದ್ದಾಗ ಹಗ್ಗ ತುಂಡರಿಸಿ ಓಡಿದ್ದು, ಹಿಡಿಯಲೆತ್ನಿಸಿದಾಗ ಸಿದ್ದಿಕ್ ತಿವಿತಕ್ಕೆ ಒಳಗಾಗಿದ್ದಾರೆ. ಗಂಭೀರ ಗಾಯಗೊಂಡ ಸಿದ್ದಿಕ್ ರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಮೃತಪಟ್ಟರು .
ಕಿಲೋ ಮೀಟರ್ ಗಳಷ್ಟು ಓಡಿದ ಕೋಣ ದಾಂದಲೆ ನಡೆಸಿದ್ದು, ಎರಡು ಅಂಗಡಿಗಳಿಗೆ ನುಗ್ಗಿ ಹಾನಿ ಎಸಗಿದೆ. ಇದಲ್ಲದೆ ವಾಹನಗಳಿಗೂ ಹಾನಿಯಾಗಿದೆ. ಭಯದಿಂದ ಹಲವು ಮಂದಿ ಓಡಿ ತಪ್ಪಿಸಲೆ ತ್ನಿಸಿದಾಗ ೨೦ ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಗಂಟೆಗಳ ಕಾಲ ಪರಿಸರದಲ್ಲಿ ಭಯ ಸೃಷ್ಟಿಸಿದ ಕೋಣವನ್ನು ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬಂದಿಗಳು ಹಿಡಿಯುವಲ್ಲಿ ಯಶಸ್ವಿಯಾಗುವುದರೊಂದಿಗೆ ಪರಿಸರವಾಸಿಗಳು ನಿಟ್ಟುಸಿರು ಬಿಟ್ಟರು.