ಕಾಸರಗೋಡು: ಬೈಕ್ ನಿಂದ ಬಿದ್ದು ಗೃಹಿಣಿ ಮೃತಪಟ್ಟ ಘಟನೆ ಮುಳ್ಳೆರೀಯ ಸಮೀಪದ ಮುಂಡೋಳ್ ಅಡ್ಕ ಎಂಬಲ್ಲಿ ನಡೆದಿದೆ. ಪುಂಡೂರಿನ ನಾರಾಯಣ ರವರ ಪತ್ನಿ ಲೀಲಾವತಿ (53) ಮೃತ ಪಟ್ಟವರು.
ಪತಿ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಕೆಳಗೆಸೆಯಲ್ಪಟ್ಟ ಲೀಲಾವತಿ ಗಂಭೀರ ಗಾಯಗೊಂಡಿದ್ದು, ಕಾಸರಗೋಡು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತ ಪಟ್ಟಿದ್ದಾರೆ.