News Kannada
Friday, March 01 2024
ಕಾಸರಗೋಡು

ಕಾಸರಗೋಡು: ಅಪಹರಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಬಂಧನ

two accused arrested in connection with kidnapping and murder
Photo Credit :

ಕಾಸರಗೋಡು : ಗಲ್ಫ್ ಉದ್ಯೋಗಿ , ಸೀತಾಂಗೋಳಿ ಮುಗುವಿನ ಅಬೂಬಕ್ಕರ್ ಸಿದ್ದಿಕ್ ( 32) ರನ್ನು ಅಪಹರಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಇಬ್ಬರನ್ನು ತನಿಖಾ ತಂಡ ಬಂಧಿಸಿದೆ.
ಮಂಜೇಶ್ವರ ಉದ್ಯಾವರದ ಅಬ್ದುಲ್ ಅಝೀಜ್ ( 37) ಮತ್ತು ಅಬ್ದುಲ್ ರಹೀಮ್ (35) ಬಂಧಿತರು.

ಅಬ್ದುಲ್ ಅಝೀಜ್ ನು ಅಬೂಬಕ್ಕರ್ ಸಿದ್ದಿಕ್ ನನ್ನು   ಕೊಲೆಗೈದ ಬಳಿಕ  ಬಂದ್ಯೋಡಿನ ಖಾಸಗಿ ಆಸ್ಪತ್ರೆಯಲ್ಲಿ  ತೊರೆದು ಪರಾರಿಯಾಗಿದ್ದ ಆರೋಪಿಯಾಗಿದ್ದು , ರಹೀಮ್ ನು ಆರೋಪಿಗಳು  ಪರಾರಿಯಾಗಲು ನೆರವಾಗಿದ್ದ ಎಂದು  ಪೊಲೀಸರು ತಿಳಿಸಿದ್ದಾರೆ.

ಉಳಿದ ಆರೋಪಿಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿದ್ದು , ಇವರನ್ನು ಶೀಘ್ರ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ .  ವೈಭವ್ ಸಕ್ಸೆನಾ  ತಿಳಿಸಿದ್ದಾರೆ . ಈ ನಡುವೆ ಪ್ರಮುಖ ರೂವಾರಿಗಳಾದ  ರಯಿಸ್ ಮತ್ತು ಶಾಫಿ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಕೃತ್ಯದಲ್ಲಿ 10 ಮಂದಿ ಶಾಮೀಲಾಗಿದ್ದು ,  ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ  ವಿಶೇಷ ತನಿಖಾ ತಂಡ ಕರ್ನಾಟಕ , ಗೋವಾ ಮೊದಲಾದೆಡೆಗೂ ತನಿಖೆ ವಿಸ್ತರಿಸಿದೆ. ಕೃತ್ಯಕ್ಕೆ  ಕೊಟೇಶನ್ ಪಡೆದಿದ್ದ ಓರ್ವ ಆರೋಪಿಯ ಉಪ್ಪಳದಲ್ಲಿರುವ ಮನೆಯಿಂದ ನಾಲ್ಕೂವರೆ ಲಕ್ಷ ರೂ . ನಗದನ್ನು  ತನಿಖಾ ತಂಡ ವಶಪಡಿಸಿಕೊಂಡಿದೆ. ಹಣಕಾಸಿನ ವ್ಯವಹಾರ  ಕೃತ್ಯಕ್ಕೆ ಕಾರಣ ಎಂದು  ತನಿಖೆಯಿಂದ ತಿಳಿದು ಬಂದಿದೆ.

ಈ ನಡುವೆ   ಅಪಹರಿಸಿ  ಹಲ್ಲೆ ಹಾಗೂ ಕೊಲೆ ನಡೆಸಿದ್ದ ಪೈವಳಿಕೆಯ   ನೂತಿಲದ  ಮನೆ ಹಾಗೂ  ಬೋಳಂಗಳದ   ಸ್ಥಳದಿಂದ  ಪೊಲೀಸರು ಮಾಹಿತಿ ಕಲೆ  ಹಾಕಿದ್ದಾರೆ. ಅಬೂಬಕ್ಕರ್ ಸಿದ್ದಿಕ್ ನ ಸಾವಿಗೆ  ತಲೆಗೆ   ಬಿದ್ದ ಬಲವಾದ ಪೆಟ್ಟು  ಕಾರಣವಾಗಿದ್ದು ,  ಎದೆ ಹಾಗೂ ಅವಯವಗಳಲ್ಲಿ ಗಾಯಗಳು ಕಂಡು ಬಂದಿ ರುವುದಾಗಿ  ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ.

ಆದಿತ್ಯವಾರದಂದು ಘಟನೆ ನಡೆದಿತ್ತು .  ಅಬೂಬಕ್ಕರ್ ಸಿದ್ದಿಕ್  ಸಹೋದರ ಅನ್ವರ್  ಮತ್ತು ಸಂಬಂಧಿಕ ಅನ್ಸಾರ್ ನನ್ನು   ಅಪಹರಿಸಿದ ತಂಡವು ಪೈವಳಿಕೆ ನೂತಿಲದ  ಮನೆಗೆ  ಕರೆತಂದು ಥಳಿಸಿದ್ದು , ಮೃತಪಟ್ಟ ಸಿದ್ದಿಕ್ ನನ್ನು   ಬಂದ್ಯೋಡಿನ ಖಾಸಗಿ ಆಸ್ಪತ್ರೆಗೆ ಕಾರಿನಲ್ಲಿ  ತಂದು  ತೊರೆದು ಪರಾರಿಯಾಗಿದ್ದರೆ ,  ಅನ್ವರ್ ಮತ್ತು  ಅನ್ಸಾರ್ ನನ್ನು  ಪೈವಳಿಕೆ ಬಳಿ ಬಿಟ್ಟು ಪರಾರಿಯಾಗಿದ್ದರು.

ಗಾಯಗೊಂಡಿದ್ದ  ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು .  ಈ ಪೈಕಿ ಅನ್ವರ್  ಎರಡು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದು ,  ಅನ್ಸಾರ್ ನನ್ನು  ಮಂಗಳೂರು ಆಸ್ಪತ್ರೆ ಯಲ್ಲಿ  ಚಿಕಿತ್ಸೆ ನೀಡಿ  ಕುಂಬಳೆಯ ಆಸ್ಪತ್ರೆಗೆ  ಕರೆ  ತಂದು ಚಿಕಿತ್ಸೆ  ನೀಡಲಾಗುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು