News Kannada
Sunday, December 10 2023
ಮಂಗಳೂರು

ಉಜಿರೆ: ರಾಜ್ಯ ಸಾಹಿತ್ಯ ಅಧಿವೇಶನದಲ್ಲಿ ‘ಸಾಹಿತ್ಯ – ಸ್ವಾತಂತ್ರ‍್ಯ- ಸ್ವಧರ್ಮ’

ujire 3 2
Photo Credit : News Kannada

ಬೆಳ್ತಂಗಡಿ : ಅಖಿಲ ಭಾರತ ಸಾಹಿತ್ಯ ಪರಿಷತ್,ಕರ್ನಾಟಕ ಆಯೋಜಿಸಿರುವ ‘ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ’ 3 ನೆಯ ರಾಜ್ಯ ಅಧಿವೇಶನ ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ‘ಸಾಹಿತ್ಯ – ಸ್ವಾತಂತ್ರ‍್ಯ ನಡುವಿನ ನಂಟು’ ಎಂಬ ವಿಷಯದ ಕುರಿತ ವಿಷಯ ಮಂಡನೆ ಅವಧಿ ಯಶಸ್ವಿಯಾಗಿ ಜರುಗಿತು.

ಕಾರ್ಯಕ್ರಮದಲ್ಲಿಅವಲೋಕಕಿಯಾಗಿ ಬೆಂಗಳೂರಿನ ಖ್ಯಾತ ವಿಮರ್ಶಕಿ ಡಾ.ಎ.ಎನ್.ಆರ್ ಲಲಿತಾಂಬ, ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತ್ಯ ಪರಿಚಾರಕ ಹರ್ಷವರ್ಧನ್ ಶೀಲವಂತ ಮತ್ತು ಪ್ರಸಿದ್ಧ ಅಂಕಣಕಾರ ಹಾಗೂ ವಾಗ್ಮಿ ರೋಹಿತ್‌ ಚಕ್ರತೀರ್ಥ ಭಾಗವಹಿಸಿ ಸ್ವಾತಂತ್ರ‍್ಯದಲ್ಲಿ ಸಾಹಿತ್ಯ ವಿಚಾರಗಳ ಕುರುತುಉಪನ್ಯಾಸ ನೀಡಿದರು.

‘ಸಾಹಿತ್ಯದಲ್ಲಿ ಮೊದಲನೆಯ ಸ್ವಾತಂತ್ರ‍್ಯಹೋರಾಟ’ ಎಂಬ ವಿಷಯದ ಕುರಿತು ಮಾತನಾಡಿದ ಸಾಹಿತ್ಯ ಪರಿಚಾರಕ ಹರ್ಷವರ್ಧನ ಶೀಲವಂತ ಸ್ವಾತಂತ್ರ‍್ಯ  ಪೂರ್ವದಲ್ಲಿ ಭಾರತೀಯರು ಅನುಭವಿಸಿದ ಸಂಕಷ್ಟಗಳನ್ನು ವಿವಿಧ ಪುಸ್ತಕಗಳ ಹಾಗೂ ಗ್ರಂಥಗಳ ಉಲ್ಲೇಖದ ಸಾಕ್ಷ್ಯಗಳನ್ನು ಸಭಿಕರ ಮುಂದಿಟ್ಟರು.

ಇತಿಹಾಸ ಪಠ್ಯಪುಸ್ತಕವು ಕ್ರಾಂತಿಕಾರಿಗಳನ್ನು ಸರಿಯಾಗಿ ವಿದ್ಯಾರ್ಥಿಗಳಿಗೆ ಅರ್ಧೈಸಿಲ್ಲ. ಕ್ರಾಂತಿಕಾರಿಗಳು ಕೇವಲ ಬಂದೂಕು ಹಿಡಿಯದೆ, ಯುದ್ಧತಂತ್ರಗಾರಿಕೆಯನ್ನು ರೂಪಿಸಿ ಸಾಹಿತ್ಯದ ಮೂಲಕ ಸ್ವರಾಜ್ಯದಕಲ್ಪನೆಯನ್ನು ನೀಡಿದರು ಎಂದು ಅಂಕಣಕಾರರಾದ ರೋಹಿತ್‌ ಚಕ್ರತೀರ್ಥ ‘ಸಾಹಿತ್ಯದಲ್ಲಿಕ್ರಾಂತಿಕಾರ್ಯ’ ವಿಷಯ ಮಂಡಿಸಿದರು.

ಮಾತನ್ನು ಮುಂದುವರೆಸಿ ಭಾರತೀಯರ ಮೂರ್ಖತನ, ಆಲಸ್ಯ, ನಿಷ್ಕ್ರಿಯತೆ ಬ್ರಿಟೀಷ್ ಸಾಮ್ರಾಜ್ಯ ಬೀಳದಿರಲು ಮುಖ್ಯಕಾರಣಎಂದು 19 ನೆಯ ಶತಮಾನದಅಂತ್ಯದಲ್ಲಿ ಹೋರಾಟಗಾರಜತಿನ್‌ತಮ್ಮ ಪತ್ರಿಕೆಯಲ್ಲಿಅಭಿಪ್ರಾಯ ಪಟ್ಟಿದ್ದಾರೆ. ಬಾಲ ಗಂಗಾಧರತಿಲಕ್‌ತಮ್ಮ ಮರಾಠ ಹಾಗೂ ಕೇಸರಿ ಪತ್ರಿಕೆಗಳಲ್ಲಿ, ಸಾವರ್ಕರ್‌ತಮ್ಮ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮ ಪುಸ್ತಕದಲ್ಲಿ ಸಾಹಿತ್ಯದ ಮೂಲಕ ಜನರಲ್ಲಿಆತ್ಮಾಭಿಮಾನ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ಪತ್ರಿಕೆಗಳು ಆರ್ಥಿಕಉದ್ದೇಶ ಹೊಂದಿರದೆ ಸ್ವಾತಂತ್ರ‍್ಯದಕಿಚ್ಚನ್ನು ಹೆಚ್ಚಿಸುತ್ತಿದ್ದವುಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಮರ್ಶಕಿಡಾ.ಎನ್.ಆರ್. ಲಲಿತಾಂಬಾ ನಮ್ಮ ನೆಲದ,ಜಲದಕಥನವನ್ನುಇದ್ದಹಾಗೆ ಸ್ಪಷ್ಟವಾಗಿ ಹೇಳುವ ಚರಿತ್ರೆ ಬೇಕಾಗಿದೆ, ಆಕರಗಳ ಶೋಧದೊಂದಿಗೆ, ಅಕ್ಷರರೂಪದಅಭಿವ್ಯಕ್ತಿಯಾದ ದಾಖಲೆಗಳ ಶೋಧವಾಗಬೇಕಾಗಿದೆಎಂದರು.

ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳ ಸಾಹಿತ್ಯಆಸಕ್ತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅ.ಭಾ.ಸಾ.ಭಕಾರ್ಯಕರ್ತಗೋವಿಂದ ಶರ್ಮಾಕಾರ್ಯಕ್ರಮ ನಿರೂಪಿಸಿದರು.

See also  ನಾವು ಭಾಷೆಯಿಂದ ವಿಘಟಿತರಾಗದೆ ಸಂಘಟಿತರಾಗಬೇಕು; ಡಾl ವೀರೇಂದ್ರ ಹೆಗ್ಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು