News Kannada
Monday, February 26 2024
ಮಂಗಳೂರು

‘ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ’ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ

Photo Credit : News Kannada

ಉಜಿರೆ ಮಾ.೧೯: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿರುವ ೩ ನೇ ರಾಜ್ಯ ಅಧಿವೇಶನ ‘ನುಡಿ ಸಾಮ್ರಾಜ್ಯದಲ್ಲಿ ಸ್ವರಾಜ್ಯ’ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ ನಡೆದ ಸಾಂಸ್ಕೃತಿಕ ಕಲಾ ಪ್ರದರ್ಶನವು ಕಲಾರಸಿಕರ ಮನಸೊರೆಗೊಳಿಸಿತು.

ಸಂಜೆಯ ರಂಗನ್ನು ಹೆಚ್ಚಿಸಿತು. ಸುಮಾರು ಮೂರು ಗಂಟೆಗಳ ಕಾಲ ನಡೆದ ವಿವಿಧ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರನ್ನು ರಂಜಿಸುವ ಜೊತೆಗೆ ವೀಕ್ಷಕರ ಶಿಳ್ಳೆ, ಚಪ್ಪಾಳೆ ಹಾಗೂ ಉತ್ಸಾಹಭರಿತ ಪ್ರೋತ್ಸಾಹಕ್ಕೆ ಸಾಕ್ಷಿಯಾಯಿತು. ಶಾಸ್ತಿçÃಯ ನೃತ್ಯಪ್ರಕಾರವಾದ ಭರತನಾಟ್ಯ, ಯಕ್ಷಗಾನ ಸೇರಿದಂತೆ ದೇಶದ ವಿವಿಧ ಬುಡಕಟ್ಟು ಜನಪದ ಕಲಾಪ್ರಕಾರಗಳಾದ ಕೊಡವ ಸುಗ್ಗಿ ಕುಣಿತ ಮತ್ತು ಹುತ್ತರಿ ಕೋಲಾಟ, ರಾಜಸ್ಥಾನದ ಬಂಜಾರ ನೃತ್ಯ, ಪಂಜಾಬಿನ ಬಾಂಗ್ಡಾ, ಮಣಿಪುರಿ ಸ್ಟೀಕ್ ಡ್ಯಾನ್ಸ್, ಒರಿಸ್ಸಾದ ಗೋಟಿಪೊವಾ ಸೇರಿದಂತೆ ಹಲವಾರು ನೃತ್ಯವೈವಿಧ್ಯಗಳನ್ನು ಪ್ರದರ್ಶಿಸಲಾಯಿತು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ರಾಜ್ಯ ಅಧಿವೇಶನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ.ಎಂ ಮೋಹನ್ ಆಳ್ವ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕದ ವಿವಿಧ ಕಲಾ ತಂಡಗಳು ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶದ ಕಲಾಪರಂಪರೆಯನ್ನು ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ಬಿಂಬಿಸುವ ಅಭೂತಪೂರ್ವ ಕಲಾಪ್ರದರ್ಶನ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮವು ಸಂಸ್ಕೃತ ಸಿರಿ ತಂಡದ ಗಾಯನ ಗೀತೆಯ ಮೂಲಕ ಶುಭಾರಂಭಗೊAಡಿತು. ನಂತರ ವಿದ್ಯಾಶ್ರೀ ಮತ್ತು ಬಳಗದ ವತಿಯಿಂದ ತುಳುನಾಡ ಸಿರಿ ಚಾವಡಿಯನ್ನು ಬಿಂಬಿಸುವ ಜಾನಪದ ನೃತ್ಯ ಪ್ರೇಕ್ಷಕರ ಕಣ್ಮನ ಸೆಳೆಯಿತು. ಹಳ್ಳಿಯ ಸೊಗಡಿನ ವೇಷಭೂಷಣಗಳಿಂದ ಕೂಡಿದ ಮಕ್ಕಳ ಚೈತನ್ಯ ಪೂರ್ಣ ನೃತ್ಯ ಎಲ್ಲರ ಗಮನ ಸೆಳೆಯಿತು. ಗಾನಯಾನ ತಂಡದಿAದ ಪ್ರದರ್ಶನಗೊಂಡ  ದೇವಿ ಮಹಾತ್ಮೆಯ ಭರತನಾಟ್ಯವು  ಇಡೀ ಸಭಾಂಗಣಕ್ಕೆ ದೈವಿಕತೆ ಕಳೆ ತಂದೊಡ್ಡಿತು.
ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘ, ಹೂಟಗಳ್ಳಿ ಮೈಸೂರು ತಂಡದ ಪುರುಷರ ಕೋಲಾಟವು ಕೊಡಗಿನ ಹುತ್ತರಿ ಹಬ್ಬದ ಆಚರಣೆಯ ಪರಿಯನ್ನು ನೃತ್ಯರೂಪಕವಾಗಿ ಪ್ರದರ್ಶಿಸಿದರು. ಜೊತೆಗೆ ಕೊಡಗಿನ ಮಹಿಳೆಯರ ಅರೆ ಭಾಷೆಯ ಸುಗ್ಗಿ ಕುಣಿತದ ಸಂಭ್ರಮವನ್ನು ಪ್ರೇಕ್ಷಕರ ಕಣ್ಮನ ತಣಿಸಿತು. ಉತ್ತರ ಕರ್ನಾಟಕದ ಜನಪದ ಸಾಹಿತ್ಯವನ್ನು ಬಿಂಬಿಸುವ ಹಾಡುಗಳನ್ನು ಬಾಗಲಕೋಟೆಯ ಪುಟ್ಟರಾಜ ಗಾಯನ ತಂಡದಿAದ ನಡೆಸಿಕೊಡಲಾಯಿತು.

ಗಮನಸೆಳೆದ ಕೀಚಕ ವಧೆ ಪ್ರಸಂಗ: ಭಿಡೆ ಸಹೋದರಿಯರು ಮತ್ತು ತಂಡದಿAದ ಕುಮಾರವ್ಯಾಸ ಭಾರತ ಕೃತಿಯಿಂದ ಆಯ್ದ ಮಹಾಭಾರತದ ಕೀಚಕವಧೆ ಪ್ರಸಂಗವನ್ನು ನೃತ್ಯರೂಪಕದಲ್ಲಿ ಪ್ರದರ್ಶಿಸಲಾಯಿತು. ಅದ್ಭುತ ನಟನೆ ಮತ್ತು ನೃತ್ಯದ ಮೂಲಕ ಈ ಪ್ರಸಂಗವನ್ನು ತಂಡ ವಿಶೇಷವಾಗಿ ತೆರೆದಿಟ್ಟಿತು. ಸಮಾಜದಲ್ಲಿ ಸ್ತ್ರೀ ಶೋಷಣೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವ ಸಾಹಸಗಾಥೆಯು ಪ್ರೇಕ್ಷಕರ ಮನಸೆಳೆಯಿತು.

ವೇದಿಕೆಯ ರಂಗು ಹೆಚ್ಚಿಸಿದ ಆಳ್ವಾಸ್ ಸಾಂಸ್ಕೃತಿಕ ವೈಭವ: ಆಳ್ವಾಸ್ ಸಾಂಸ್ಕೃತಿಕ ವೈಭವ ತಂಡವು ಭಾರತ ದೇಶದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸಂದೇಶದ ಮೂಲಕ ಭಾರತದ ಎಲ್ಲಾ ರಾಜ್ಯಗಳ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮವನ್ನು ವರ್ಣಮಯವಾಗಿ ಪ್ರದರ್ಶಿಸಿತು.

ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನವು ವಿಶೇಷತೆಯಿಂದ ಕೂಡಿದ್ದು ಜನರನ್ನು ಮೂಕಪ್ರೇಕ್ಷಕರಾಗಿ ಮಾಡಿತು. ರಾಜಸ್ಥಾನ ಮೂಲದ ಲಂಬಾಣಿ ಜನಾಂಗದ ಬಂಜಾರ ನೃತ್ಯ ಪ್ರದರ್ಶಿಸಿದ ತಂಡವು ಸಭಾಂಗಣಕ್ಕೆ ಸಂಭ್ರಮದ ಮೆರುಗು ನೀಡಿತು. ಮಣಿಪುರದ ಪ್ರಸಿದ್ಧ ಸ್ಟಿಕ್ ಡ್ಯಾನ್ಸ್ ನೃತ್ಯವು ಜನರ ಕುತೂಹಲವನ್ನು ಕೆರಳಿಸಿತು. ಕಲಾವಿದರ ಕೈಚಳಕವನ್ನೇ ಅವರಲಂಭಿಸಿರುವ ನೃತ್ಯ ಪ್ರಕಾರ ಇದಾಗಿದ್ದು, ನೋಡುಗರನ್ನು ಮಂತ್ರಮುಗ್ಧಗೊಳಿಸಿತು.

ಮಧ್ಯಪ್ರದೇಶದಲ್ಲಿ ಜನಜನಿತವಾದ ಮಲ್ಲಕಂಬದ ಪ್ರದರ್ಶನವನ್ನು ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ತೋರಿಸಿಕೊಡುವ ಮೂಲಕ ತಮ್ಮಲ್ಲಿನ ಸಾಮರ್ಥ್ಯ ಹಾಗೂ ಸಾಹಸವನ್ನು ಪ್ರದರ್ಶಿಸಿದರು. ಪಂಜಾಬಿನಲ್ಲಿ ಪ್ರಸಿದ್ಧವಾದ ‘ಬಾಂಗ್ರ’ ನೃತ್ಯವು ವೀಕ್ಷಕರನ್ನು ಕುಳಿದು ಕುಪ್ಪಳಿಸುವಂತೆ ಮಾಡಿತು. ಒರಿಸ್ಸಾದ ಪುರಿ ಜಗನ್ನಾಥನ ಆರಾಧನೆಯ ಪ್ರಸಿದ್ಧ ಗೋಟಿಪುವಾ ನೃತ್ಯ ಪ್ರಕಾರವನ್ನು ಬಾಲಕರು ಬಾಲಕಿಯರ ವೇಷದಲ್ಲಿ ನರ್ತಿಸುವ ಮೂಲಕ ವೇದಿಕೆಗೆ ಹೊಸ ಮೆರುಗು ನೀಡಿದರು. ತದನಂತರ ಪಶ್ಚಿಮ ಬಂಗಾಳದ ಪ್ರಸಿದ್ಧ ಪುರುಲಿಯಾ ಚಾವು ನೃತ್ಯ ಪ್ರೇಕ್ಷಕರಲ್ಲಿ ದಿಗ್ಭçಮೆ ಮೂಡಿಸುವಲ್ಲಿ ಯಶಸ್ವಿಯಾಯಿತು. ಏಳು ಸಿಂಹಗಳು ಸೇರಿ ಒಂದು ಕಾಡುಕೋಣ (ಕಾಟಿ)ವನ್ನು ಬೇಟೆಯಾಡುವ ದೃಶ್ಯ ವೈಭವ ಮಹೀಷಾಸುರ ಮರ್ಧಿನಿ ಪ್ರಸಂಗವನ್ನು ನೆನಪಿಸಿತು. ಒಟ್ಟಿನಲ್ಲಿ ನುಡಿಸಾಮ್ಯಾಜ್ಯದಲ್ಲಿ ಸ್ವರಾಜ್ಯ ಕಾರ್ಯಕ್ರಮದಲ್ಲಿ ಮೂಡಿಬಂದ ಈ ಕಲಾ ವೈವಿಧ್ಯತೆ ಸಾಹಿತ್ಯಾಸಕ್ತರಿಗೆ ರಸದೌದಣ ನೀಡಿದ್ದಂತೂ ನಿಜ. ಜ್ಯೋತಿ ಭಟ್, ಹರಿನಾಥ್ ವಿ,ಎ ವಿನಿತಾ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಎಸ್‌ಡಿಎಂ ಕಾಲೇಜು, ಉಜಿರೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು