ಬಂಟ್ವಾಳ: ಪುತ್ತೂರು ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇದರ ಸಹಕಾರದೊಂದಿಗೆ “ನೃತ್ಯಧಾರ-2022” ಸಮಾರಂಭದಲ್ಲಿ ಯಕ್ಷಗಾನ ರಂಗದ ಖ್ಯಾತ ಹಾಸ್ಯಗಾರ ದಿವಂಗತ ನಯನಕುಮಾರ್ ಅವರ ಸ್ಮರಣಾರ್ಥ ಕಲಾ ನಯನ ಪ್ರಶಸ್ತಿಯನ್ನು ಹಿರಿಯ ನೃತ್ಯಗುರು ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್ ಪ್ರದಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ವಾನ್ ಉಳ್ಳಾಲ ಮೋಹನ್ ಕುಮಾರ್ ಸನಾತನ ,ಪರಂಪರಾಗತವಾದ ಭರತನಾಟ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರೀದೇವಿ ಕಲಾಕೇಂದ್ರ ಶ್ರಮಿಸುತ್ತಿರುವುದು ಪ್ರಶಂಶನೀಯವಾಗಿದೆ ಎಂದರು.
ಶನಿವಾರ ಸಂಜೆ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಪುತ್ತೂರು ಭಾವನ ಕಲಾ ಆಟ್ಸ್ ೯ನ ವಿಘ್ನೇಶ್ ವಿಶ್ವಕರ್ಮ ದಂಪತಿಯನ್ನು ಸನ್ಮಾನಿಸಲಾಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಪ್ರಶಸ್ತಿ ಪ್ರದಾನಗೈದು, ಶ್ರೀಧೇವಿ ನೃತ್ಯಾರಾಧನಾ ಕೇಂದ್ರ ಕಳೆದ 15 ವರ್ಷಗಳಲ್ಲಿ ಬಹಳಷ್ಟು ಕಲಾವಿದರನ್ನು ಸಮಾಜಕ್ಕೆ ಅರ್ಪಿಸಿರುವುದು ಅಭಿನಂದನೀಯವಾಗಿದೆ ಎಂದರು.
ಪುತ್ತೂರು ನಗರಸಭೆಯ ಅಧ್ಯಕ್ಷ ಜೀವಂಧರ ಜೈನ್ ಅವರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ರಾಜೇಶ್, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ್ ಶೆಟ್ಟಿ, ರಾಜೇಶ್ವರಿ ಉಳ್ಳಾಲ ಅತಿಥಿಯಾಗಿ ಭಾಗವಹಿಸಿದ್ದರು.
ಇದೇ ವೇಳೆ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ವಿಶೇಷ ಬೆಳಕಿನ ವಿನ್ಯಾಸದಲ್ಲಿ “ನೃತ್ಯಧಾರ” ಹಾಗೂ ವಿದುಷಿ ರೋಹಿಣಿ ಉದಯ್ ಅವರಿಂದ ನವಗೃಹ ನೃತ್ಯರೂಪಕ ನಡೆಯಿತು.
ವಿದುಷಿ ರೋಹಿಣಿ ಉದಯ್ ಅವರು ಪ್ರಸ್ತಾವನೆಗೈದರು. ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರದ ಸಂಚಾಲಕ ಉದಯ ವೆಂಕಟೇಶ್ ಭಟ್ ಸ್ವಾಗತಿಸಿ,ವಂದಿಸಿದರು.