News Kannada
Wednesday, December 06 2023
ಮಂಗಳೂರು

ಬಂಟ್ವಾಳ: ತಾಲೂಕುಮಟ್ಟದ ಕೊರಗ ಸಮುದಾಯದ ಕುಂದು ಕೊರತೆಗಳ ಸಭೆ

bantwal 1 1
Photo Credit : By Author

ಬಂಟ್ವಾಳ:  ಜಿಲ್ಲಾಡಳಿತದ ಅಂಕಿ-ಅಂಶದನ್ವಯ ದ.ಕ.ಜಿಲ್ಲೆಯಲ್ಲಿ ಪ್ರಸ್ತುತ ಕೊರಗ ಸಮುದಾಯದ ಜನಸಂಖ್ಯೆ ಇಳಿಮುಖವಾಗುತ್ತಿದ್ದು, ಮುಂದಿನ 10 ರಿಂದ15 ವರ್ಷದಲ್ಲಿ ಇನ್ನಷ್ಟು ನಶಿಸಿ ಹೋಗುವ ಸಾಧ್ಯತೆಯ ಕುರಿತಂತೆ ಕಳವಳ ವ್ಯಕ್ತಪಡಿಸಿದ ಕೊರಗ ಸುಮುದಾಯದ ಮುಖಂಡರು ಯಾವುದೇ ಕಾರಣಕ್ಕೂ ಇನ್ನೊಂದು ವರ್ಗದ ಜೊತೆ ಸೇರಿಸಿಕೊಳ್ಳದೆ ಪ್ರತ್ಯೇಕವಾಗಿ ಸರಕಾರದ ಯೋಜನೆ ಸವಲತ್ತು ಸಿಗುವಂತಾಗಬೇಕು, ಈ ಮೂಲಕ ನಮಗೂ  ಶಾಶ್ವತ ಬದುಕು  ಕಟ್ಟಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದು ಆಗ್ರಹಿಸಿದರು.

ಬುಧವಾರ ಬಂಟ್ವಾಳ ತಾಲೂಕು ಪಂಚಾಯತ್ ನ ಎಸ್ ಜಿ ಎಸ್ ಆರ್ ವೈ ಸಭಾಂಗಣದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ತಾಲೂಕುಮಟ್ಟದ ಕೊರಗ ಸಮುದಾಯದ ಕುಂದು ಕೊರತೆಗಳ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಕೊರಗ ಸಮುದಾಯದ ಮುಖಂಡ ಸುಂದರ ಬೆಳುವಾಯಿ ಅವರು ಬಂಟ್ವಾಳ ತಾಲೂಕಿನಲ್ಲಿ ಕೇವಲ 572 ಮಂದಿಯಷ್ಟೆ ಜನಸಂಖ್ಯೆ ಇದ್ದು, ನಮ್ಮ ಸಮುದಾಯದ ಅಧ್ಯಯನ ನಡೆಸಿ ಜಿಲ್ಲಾಡಳಿತಕ್ಕೆ ಸಲ್ಲಿಕೆಯಾದ ಡಾ.ಮಹಮ್ಮದ್ ಫಿರ್ ವರದಿ  ಇನ್ನು ಸಮಗ್ರವಾಗಿ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸಭೆಯ ಗಮನಸೆಳೆದರು. ಮುಖಂಡ ಸಂಜೀವ ಅವರು ಇದಕ್ಕೆ ಧ್ವನಿಗೂಡಿಸಿದರು.

ನಮ್ಮ ಹಿರಿಯರ ಕಾಲದಿಂದಲು ನಮ್ಮಲ್ಲಿ ಯಾವುದೇ ಮೂಲಭೂತವಾದ ದಾಖಲೆಗಳಿಲ್ಲ, 30 ವರ್ಷದಿಂದೀಚೆಗೆ ನಮ್ಮ ಯುವ ಪೀಳಿಗೆ ಶಿಕ್ಷಣದತ್ತ ಮುಖಮಾಡುತ್ತಿದೆ.ಅಧಿಕಾರಿಗಳು ಇಂತಹ ಸಭೆ ನಡೆಸಿ ಸಮಸ್ಯೆಗಳನ್ನು ಅರಿತುಕೊಂಡು ಅನುಷ್ಠಾನಕ್ಕೆ ಮುಂದಾದಾಗ ಆ ಅಧಿಕಾರಿ ವರ್ಗಾವಣೆಯಾಗಿ ತೆರಳುತ್ತಾರೆ.ಮತ್ತೆ ನಮ್ಮ ಸಮಸ್ಯೆಗಳು ಹಾಗೆ ಉಳಿಯುತ್ತದೆ.ಹೊಸ ಅಧಿಕಾರಿಗಳು ಬಂದಾಗ ಪುನರಪಿ ಅವರಿಗೆ ಸಮಸ್ಯೆ ವಿವರಿಸಬೇಕಾಗುತ್ತದೆ.ಹಾಗಾಗಿ ನಮ್ಮ ಸಮಸ್ಯೆಗಳು ಕೇವಲ ಚರ್ಚೆಗೆ ಸೀಮಿತವಾಗಿ  ಪರಿಹಾರ ಕಾಣದೆ ವರ್ಷಾನುಗಟ್ಟಲೆಯಿಂದ ಹಾಗೆ ಉಳಿದಿದೆ ಎಂದು ಸುಂದರ ಬೆಳುವಾಯಿ ಸಭೆಗೆ ತಿಳಿಸಿದರು.

ಗುಂಪು ಸಭೆ ನಡೆಸಿ
ನಮ್ಮ ಸಮಸ್ಯೆ ಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಗ್ರಾಮಮಟ್ಟದಲ್ಲೇ ಮಾಸಿಕವಾಗಿ ಗುಂಪುಸಭೆ ನಡೆಸಿದರೆ ಸ್ಥಳೀಯವಾಗಿ ಸಮಸ್ಯೆ ಪರಿಹಾರ ಕಾಣಲು ಸಾಧ್ಯ ಎಂದು ಅವರು  ಸಲಹೆ ನೀಡಿದರು.
ಈ ಸಂದರ್ಭ ದಲ್ಲಿ ಸ್ಥಳಕ್ಕಾಗಮಿಸುವ ಅಧಿಕಾರಿಗಳು ನಮ್ಮ ಸಮಸ್ಯೆಯ ವಾಸ್ತವಾಂಶ ಅರಿತುಕೊಂಡು ಪರಿಹಾರ ನೀಡಬೇಕು , ಆದರೆ ಮೂಲಭೂತ ದಾಖಲೆಗಳನ್ನು ಕೇಳಿದರೆ ನಮ್ಮಿಂದ ಸಿಗದು ಎಂದು ಅವರು ತಹಶೀಲ್ದಾರ್ ಡಾ.ಸ್ಮಿತಾ ಅವರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಡಾ.ಸ್ಮಿತಾರಾಮು ಅವರು ಗ್ರಾಮವಾಸ್ತವ್ಯ ಮಾದರಿಯಲ್ಲಿ  ಸಭೆಯನ್ನು ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಕೊರಗ ಸಮುದಾಯಭವನ  ಮರಿಚಿಕೆ:
ಕೊರಗ ಸಮುದಾಯ ಜನರು ಒಂದೆಡೆ ಸೇರಿ ತಮ್ಮ ಸಮಸ್ಯೆಗಳನ್ನು ಚರ್ಚಿಸುವ ನಿಟ್ಟಿನಲ್ಲಿ ಕೊರಗ ಸಮುದಾಯ ಭವನ ನಿರ್ಮಾಣಕ್ಕೆ ಬಿ.ಸಿ.ರೋಡಿನ ರೈಲ್ವೇ ನಿಲ್ದಾಣದ ಬಳಿ ಜಮೀನು ಗುರುತಿಸಲಾಗಿತ್ತಲ್ಲದೆ ಇದಕ್ಕೆ ಮಂಜೂರಾದ ಅನುದಾನಕ್ಕೆ ಕ್ರಿಯಾಯೋಜನೆಯನ್ನು ತಯಾರಿಸಲಾಗಿತ್ತು.
ಆದರೆ ಈ ಸಮುದಾಯ ಭವನ ನಮ್ಮ ಪಾಲಿಗೆ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಪ್ರತಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗುವುದು ಬಿಟ್ಟರೆ ಅದು ಯಾವ ಹಂತದಲ್ಲಿದೆ ಎಂಬ ಯಾವುದೇ ಮಾಹಿತಿ ಸಿಗುತ್ತಿಲ್ಲ ಎಂದು ಮುಖಂಡ ಸಂಜೀವ ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸಮಾಜಕಲ್ಯಾಣ ಇಲಾಖೆಯಿಂದಾಗಲೀ, ಅಧಿಕಾರಿಗಳಿಂದಾಗಲಿ ಸಮರ್ಪಕ ಉತ್ತರ ಮಾತ್ರ ದೊರಕಲಿಲ್ಲ, ಕೊರಗ ಸಮುದಾಯಕ್ಕೆ ಗುರುತಿಸಲಾಗುವ ಜಮೀನು ಕೊನೆಗಳಿಗೆಯಲ್ಲಿ ಉಳ್ಳವರ ಪಾಲಾಗುತ್ತಿರವ ಬಗ್ಗೆ ಉದಾಹರಣೆ ಸಹಿತ ಸಭೆಯ ಗಮನಸೆಳೆದ ಸುಂದರ ಬೆಳುವಾಯಿ ನಮ್ಮ ಸಮುದಾಯಕ್ಕೆ ಕೃಷಿ ಜಮೀನು ಸಿಗುವವರೆಗೂ ಹೋರಾಟ ನಡೆಸಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.
ಜಮೀನಿನ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ, ಅವಕಾಶ ಇದ್ದರೆ ಸೂಕ್ತವಾದ  ವ್ಯವಸ್ಥೆ ಕಲ್ಪಿಸುವುದಾಗಿ  ತಾ.ಪಂ.ಇ.ಒ.ರಾಜಣ್ಣ ಭರವಸೆಯಿತ್ತರು.
ಆಯುಷ್ಮಾನ್ ಕಾಡ್೯ ಹೊಂದಿರುವ  ರೋಗಿಗಳು ವೆನ್ಲಾಕ್ ಆಸ್ಪತ್ರೆಗೆ ದಾಖಲಾದರೆ ನಮ್ಮವರು ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂದು ಉದಾಹರಣೆ ಸಹಿತ ವಿವರಿಸಿದ ಸಂಜೀವ ಅವರು ನಮ್ಮ ಸಮುದಾಯ ಇನ್ನೇನು 10 ರಿಂದ15 ವರ್ಷ ಬಾಳಬಹುದು ಅದುವರೆಗೆ ನಮ್ಮ ಜೊತೆಯು ಪ್ರೀತಿ,ವಿಶ್ವಾಸ,ನಂಬಿಕೆಯನ್ನಿರಿಸಿ ವ್ಯವಹರಿಸುವಂತಾಗಬೇಕು ಎಂದು ಮಾರ್ಮಿಕವಾಗಿ ಹೇಳಿದರು.ಅದಕ್ಕಾಗಿ ಖಾಸಗಿ ಆಸ್ಪತ್ರೆಯ ಜೊತೆ ಒಪ್ಪಂದ ಮಾಡಿಕೊಂಡು ಅಲ್ಲಿ ಚಿಕಿತ್ಸೆ ಪಡೆಯಲಾಗುತ್ತಿದೆ ಎಂದರು.
ಕಾಟಾಚಾರಕ್ಕೆ ಸಭೆ ಅಗದಿರಲಿ
ಕೊರಗರ ಸಮಸ್ಯೆ ಗಳ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಇಂತಹ ಸಭೆಯಲ್ಲಿ ಚರ್ಚೆ ಮಾಡುತ್ತಲೇ ಬಂದಿದ್ದೇವೆ,ಕೆಲವು ಸಮಸ್ಯೆಗಳ ಬಗ್ಗೆ ಲಿಖಿತ ಅರ್ಜಿಯನ್ನು ಕೊಟ್ಟಿದ್ದೆವೆ  ಆದರೆ ಯಾವುದೇ ಪ್ರಯೋಜನ ವಾಗಿಲ್ಲ . ಈ ಸಭೆ ಕೇವಲ ಕಾಟಾಚಾರಕ್ಕೆ ನಡೆಸದೆ ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಅಧಿಕಾರಿಗಳಿಂದ ಆಗಬೇಕು ಎಂದು ಬಾಬು ಬಾಳೆಪುಣಿ ತಿಳಿಸಿದರು.
ಬೋಳಂತೂರು ಗ್ರಾಮದ ನಾರಾಯಣಕೋಡಿ ಎಂಬಲ್ಲಿ  ಟಾಂಕಿ,ಪೈಪ್ ಲೈನ್ ಎಲ್ಲವು ಆಗಿದೆ ಆದರೆ ನೀರು ಮಾತ್ರ ಪೂರೈಕೆ ಆಗುತ್ತಿಲ್ಲ,ಮಂಗಳವಾರ ಸಂಜೆ ಪಂಚಾಯತ್ ನಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದೆ.
ನೀರಿನ ವ್ಯವಸ್ಥೆ ಇಲ್ಲದಿರುವುದರಿಂದ ಕೃಷಿ ಚಟುವಟಿಕೆಗೂ ತೊಂದರೆಯಾಗಿದೆ ಎಂದು ಸ್ಥಳೀಯ ಮಹಿಳೆಯೋರ್ವರು ಸಭೆಯ ಗಮನಕ್ಕೆ ತಂದರಲ್ಲದೆ ಬುಟ್ಟಿ ತಯಾರೊಕೆಗೆ ಸ್ವದ್ಯೋಗದಲ್ಲಿ ಶೆಡ್ ನಿರ್ಮಿಸಿಕೊಡಲು ವ್ಯವಸ್ಥೆ ಮಾಡುವಂತೆ ಕೋರಿದರು. ಸುಂದರಿ, ಬಾಗಿ  ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದರು.  ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜಯಶ್ರೀ ಉಪಸ್ಥಿತರಿದ್ದರು.  ಉಪಸ್ಥಿತರಿದ್ದರು.
See also  ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಕಂಕನಾಡಿ : ಬಸ್ ತಂಗುದಾಣ ಉದ್ಘಾಟನಾ ಸಮಾರಂಭ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು