News Kannada
Sunday, March 03 2024
ಮಂಗಳೂರು

ಮಾ. 19ರಂದು ಮಂಗಳೂರಿಗೆ ಆಗಮಿಸಲಿರುವ ಕೊಂಕಣಿ ಲೇಖಕ ದಾಮೋದರ ಮೌಜೊ

Photo Credit : News Kannada

ಮಂಗಳೂರು : ಜ್ಞಾನಪೀಠ ಪ್ರಶಸ್ತಿ ಘೋಷಿತ ಕೊಂಕಣಿ ಲೇಖಕ ದಾಮೋದರ ಮೌಜೊ ದಿನಾಂಕ ಮಾರ್ಚ್ ೧೯, ೨೦ ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.

ವಿಶ್ವ ಕೊಂಕಣಿ ಕೇಂದ್ರದಲ್ಲಿ ಮಾರ್ಚ್ ೨೦ ರಂದು ಪೂರ್ವಾಹ್ನ ೧೦ಗಂಟೆಗೆ ನಡೆಯಲಿರುವ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ ಮತ್ತು ಶ್ರೀ ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅಭಿನಂದನಾ ಭಾಷಣವನ್ನು ನೀಡಲಿದ್ದಾರೆ.

೧೯ನೇ ತಾರೀಕಿನಂದು ವಿಶ್ವ ಕೊಂಕಣಿ ಕೇಂದ್ರ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಜಂಟಿ ಆಯೋಜನೆಯಲ್ಲಿ ಜರಗಲಿರುವ “ಬಸ್ತಿ ವಾಮನ ಶೆಣೈ – ಜೀವನ ಮತ್ತು ಕಾರ್ಯ” ಕುರಿತಾದ ಸಿಂಪೊಸಿಯಮ್ ನಲ್ಲಿ ಮುಖ್ಯ ಅತಿಥಿಯಾಗಿ ಆಹ್ವಾನಿತರಾಗಿರುವ ಶ್ರೀ ದಾಮೋದರ ಮೌಜೊ ಆ ಬಳಿಕ ವಿಶ್ವ ಕೊಂಕಣಿ ಕೇಂದ್ರ ಮತ್ತು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಜಂಟಿ ಆಯೋಜನೆಯಲ್ಲಿ ಜರಗಲಿರುವ ವಿಶ್ವ ಕೊಂಕಣಿ ಸಮಾರೋಹ (ಕೊಂಕಣಿ ಲಿಟ್ ಫೆಸ್ಟ್) ದಲ್ಲಿ “ಕೊಂಕಣಿ ಸಾಹಿತ್ಯ: ಜ್ಞಾನಪೀಠ ಮತ್ತು ಮುಂದಿನ ಹಾದಿ” ಕುರಿತಾಗಿ ನಡೆಯಲಿರುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ.  ಕೊಂಕಣಿ ಸಾಹಿತಿ ಹೆಚ್. ಎಂ. ಪೆರ್ನಾಲ್ ಈ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಗೋವಾದ ಮಜೋರ್ಡಾದಲ್ಲಿ ವಾಸವಾಗಿರುವ ಶ್ರೀ ಮೌಜೊ ಕೊಂಕಣಿಯ ಪ್ರಸಿದ್ಧ ಕಾದಂಬರಿಕಾರರಾಗಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಗೋವಾ ವಿಮೋಚನೆ, ಅಧಿಕೃತ ರಾಜ್ಯಭಾಷೆ, ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಕೊಂಕಣಿ, ಶಾಲಾ ಶಿಕ್ಷಣದಲ್ಲಿ ಕೊಂಕಣಿ ಮೊದಲಾದ ಅನೇಕ ಹೋರಾಟಗಳಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಮೌಜೊರವರ ಕಾದಂಬರಿಗಳು ಅನೇಕ ಭಾಷೆಗಳಿಗೆ ಅನುವಾದಗೊಂಡು ಪ್ರಸಿದ್ಧವಾಗಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು