News Kannada
Sunday, March 03 2024
ಮಂಗಳೂರು

ಮುಂಡಾಜೆ ಪರಿಸರದ ಮನೆಗಳ ಸಮೀಪ ಅನಧಿಕೃತವಾಗಿ ಡ್ರೋನ್ ಹಾರಾಟ

Mangaluru: Derebail Sankesh area CITU welcome committee formed
Photo Credit :

ಬೆಳ್ತಂಗಡಿ : ತಾಲೂಕಿನ ಮುಂಡಾಜೆ ಗ್ರಾಮದ ಕಡಂಬಳ್ಳಿ ವಾಳ್ಯ, ಕೊಪ್ಪಲ, ಶ್ರವಣೆ, ಕಲ್ಮಂಜ ಗ್ರಾಮದ ಆನಂಗಳ್ಳಿ ವಾಳ್ಯ, ಮೂಲಾರು ಪರಿಸರದ ಮನೆಗಳ ಸಮೀಪ ಗುರುವಾರ ಮಧ್ಯಾಹ್ನದ ವೇಳೆ ಅನಧಿಕೃತವಾಗಿ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈ ಪ್ರದೇಶಗಳಲ್ಲಿ ಮೃತ್ಯುಂಜಯ ನದಿ ಹರಿಯುತ್ತಿದ್ದು,ಒಂದು ಭಾಗ ಕಲ್ಮಂಜ ಹಾಗೂ ಇನ್ನೊಂದು ಭಾಗ ಮುಂಡಾಜೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇದೆ.ನದಿ ಪರಿಸರ ಹಾಗೂ ಇಲ್ಲಿನ ಮನೆಗಳ ತೀರಾ ಸಮೀಪದವರೆಗೂ ಡ್ರೋನ್ ಹಾರಾಟ ನಡೆಸಿದೆ.

ಯಾವುದೇ ಸರಕಾರಿ ಇಲಾಖೆಗಳ ಸಮೀಕ್ಷೆ ಕುರಿತು ಮಾಹಿತಿ ಇಲ್ಲದೆ ಈ ಪ್ರದೇಶದಲ್ಲಿ ಯಾವ ಕಾರಣಕ್ಕೆ ಡ್ರೋನ್ ಹಾರಾಟ ನಡೆಸಿದೆ ಎಂಬುದು ತಿಳಿದುಬಂದಿಲ್ಲ. ನದಿಯಲ್ಲಿರುವ ಸಂಪನ್ಮೂಲಗಳ ಲೂಟಿ ಮಾಡುವ ಅಥವಾ ಪರಿಸರದಲ್ಲಿ ಯಾವುದಾದರೂ ಅನಧಿಕೃತ ಚಟುವಟಿಕೆ ನಡೆಸುವ ಉದ್ದೇಶವಿರಬಹುದೇ ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

ಕಳೆದ ಮಾ.17ರಂದು ಮುಂಡಾಜೆಯ ದುಂಬೆಟ್ಟು ಪ್ರದೇಶದಲ್ಲೂ ಇದೇ ರೀತಿ ಅನಧಿಕೃತ ಡ್ರೋನ್ ಹಾರಾಟ ನಡೆಸಿದ್ದು ಹಲವು ಸಂಶಯಗಳಿಗೆ ಕಾರಣವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು